ಸೋಮವಾರ, ಮೇ 23, 2022
21 °C

ಪ್ರಿನ್ಸ್ ಜುವೆಲರಿಯಲ್ಲಿ ರಿಯಾಯಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿನ್ನಾಭರಣಗಳ ಮಾರಾಟ ಕಂಪನಿ ಪ್ರಿನ್ಸ್‌ ಜುವೆಲರಿಯಲ್ಲಿ ಮದುಮಗಳಿಗೆ ಹೊಸ ಆಭರಣಗಳ ಸಂಗ್ರಹವನ್ನು ಹಬ್ಬಗಳ ಋತುವಿನಲ್ಲಿ ಸಿದ್ಧಪಡಿಸಲಾಗಿದೆ.

ಹಬ್ಬಗಳ ಸಂದರ್ಭದಲ್ಲಿ ಮುಹೂರ್ತಂ ಹೆಸರಿನಲ್ಲಿ ಆಭರಣಗಳ ಸಂಗ್ರಹವನ್ನು ಕಂಪನಿ ಬಿಡುಗಡೆ ಮಾಡಿದೆ. ಇದರಲ್ಲಿ ಚಿನ್ನ ಹಾಗೂ ವಜ್ರದ ಆಭರಣಗಳು ಇವೆ. ಸಾಂಪ್ರದಾಯಿಕ ನೆಕ್‌ಲೇಸ್‌ಗಳು, ಬಳೆಗಳು, ಕಿವಿಯೋಲೆಗಳು ಸೇರಿದಂತೆ ಹಲವು ಆಭರಣಗಳು ಈ ಸಂಗ್ರಹದಲ್ಲಿ ಇವೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ದೀಪಾವಳಿ ಹಬ್ಬದ ಕೊಡುಗೆಯಾಗಿ ಕಂಪನಿಯು ವೇಸ್ಟೇಜ್‌ ಮೇಲೆ ಶೇಕಡ 30ರಷ್ಟು ರಿಯಾಯಿತಿ ಘೋಷಿಸಿದೆ. ಚಿನ್ನಾಭರಣ ಖರೀದಿ ವೇಳೆ ಪ್ರತಿ ಗ್ರಾಂಗೆ ₹ 350ರವರೆಗೆ ಉಳಿತಾಯ ಮಾಡಲು ಅವಕಾಶ ಇದೆ, ವಜ್ರದ ಆಭರಣಗಳಿಗೆ ಪ್ರತಿ ಕ್ಯಾರಟ್‌ ಮೇಲೆ ಶೇಕಡ 15ರಷ್ಟು ರಿಯಾಯಿತಿ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.