ಬೆಂಗಳೂರು: ತಂತ್ರಜ್ಞಾನ ವಲಯದ ಕಂಪನಿ ‘ಪ್ರೊ ಎಫ್ಎಕ್ಸ್ ಟೆಕ್ ಲಿಮಿಟೆಡ್’ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ₹15 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ಲಾಭವು ಶೇ 24ರಷ್ಟು ಹೆಚ್ಚಾಗಿದೆ.

ಆರ್ಥಿಕ ವರ್ಷದಲ್ಲಿ ಕಂಪನಿಯ ವರಮಾನವು ಶೇ 37ರಷ್ಟು ಹೆಚ್ಚಾಗಿದ್ದು ₹177 ಕೋಟಿಗೆ ತಲುಪಿದೆ. ಅರ್ಥ ವ್ಯವಸ್ಥೆಯಲ್ಲಿ ಅನಿಶ್ಚಿತತೆ, ಕರೆನ್ಸಿಯ ಮೌಲ್ಯದಲ್ಲಿ ಏರಿಳಿತ ಇದ್ದಾಗಲೂ ಈ ಸಾಧನೆ ಸಾಧ್ಯವಾಗಿದೆ ಎಂದು ಕಂಪನಿ ಹೇಳಿದೆ.

‘ಕಾರ್ಯಾಚರಣೆಗಳಲ್ಲಿ ಶಿಸ್ತು, ವೆಚ್ಚಗಳ ನಿರ್ವಹಣೆಯಲ್ಲಿ ವಿವೇಕ, ಹೆಚ್ಚಿನ ವರಮಾನ ತಂದುಕೊಡುವ ಗ್ರಾಹಕರ ಮೇಲೆ ಜಾಸ್ತಿ ಗಮನ ನೀಡಿದ್ದುದು ಹಣಕಾಸಿನ ಸಾಧನೆ ಉತ್ತಮವಾಗುವುದಕ್ಕೆ ನೆರವಾಗಿವೆ’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ‘ಪ್ರೊ ಎಫ್ಎಕ್ಸ್’ ಕಂಪನಿಯು ಅದಾನಿ ಸಮೂಹ, ರಿಲಯನ್ಸ್ ಸಮೂಹ ಮತ್ತು ಟಾಟಾ ಸಮೂಹಕ್ಕೆ ಸೇವೆ ಒದಗಿಸಿರುವುದಾಗಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.