ಭಾನುವಾರ, ಆಗಸ್ಟ್ 25, 2019
28 °C

ತಗ್ಗಿದ ಬೇಡಿಕೆ: ವಾಹನ ತಯಾರಿಕೆ ಇಳಿಕೆ

Published:
Updated:

ನವದೆಹಲಿ: ದೇಶದಲ್ಲಿ ವಾಹನ ಮಾರಾಟ ಕುಸಿತ ಕಂಡಿದೆ. ಹೀಗಾಗಿ ವಿವಿಧ ಕಂಪನಿಗಳು ಬೇಡಿಕೆಗೆ ಅನುಗುಣವಾಗಿ ತಯಾರಿಕೆಯನ್ನು ಹೊಂದಿಸಿಕೊಳ್ಳುತ್ತಿವೆ.

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ (ಜುಲೈ–ಸೆಪ್ಟೆಂಬರ್) ಒಟ್ಟಾರೆ 8 ರಿಂದ 14 ದಿನಗಳವರೆಗೆ ತಯಾರಿಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿ ತಿಳಿಸಿದೆ.

ಏಪ್ರಿಲ್‌–ಜುಲೈನಲ್ಲಿ ಕಂಪನಿಯ ದೇಶಿ ಮಾರಾಟ ಶೇ 8ರಷ್ಟು ಇಳಿಕೆಯಾಗಿದೆ. ಜುಲೈನಲ್ಲಿ ಮಾರಾಟ ಶೇ 16ರಷ್ಟು ಕಡಿಮೆಯಾಗಿದೆ.

ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ತಯಾರಿಕೆಯಲ್ಲಿ ಮಾಡಲಾಗುತ್ತಿದೆ ಎಂದು ಟಾಟಾ ಮೋಟರ್ಸ್ ಕಂಪನಿ ವಕ್ತಾರರೊಬ್ಬರು ತಿಳಿಸಿದ್ದಾರೆ.

Post Comments (+)