ಮುಂಬೈ: ಪಶ್ಚಿಮ ಏಷ್ಯಾದಲ್ಲಿ ಶುರುವಾಗಿರುವ ಸಂಘರ್ಷವು ಕೆಲವು ವಾರಗಳಿಗಿಂತ ಹೆಚ್ಚು ಅವಧಿಗೆ ಮುಂದುವರಿದರೆ ದೇಶದ ಕಂಪನಿಗಳ ಲಾಭವು ತಗ್ಗುವ ಅಪಾಯ ಇದೆ ಎಂದು ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟಿಸ್ ವರದಿ ತಿಳಿಸಿದೆ.

ಸಂಘರ್ಷದ ಪರಿಣಾಮವಾಗಿ ತೈಲ ಮತ್ತು ಅನಿಲ ಬೆಲೆ ಹೆಚ್ಚಳವಾಗಿ, ದೇಶದ ಆರ್ಥಿಕತೆ ಮತ್ತು ಮಾರುಕಟ್ಟೆಯ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.

ಪಶ್ಚಿಮ ಏಷ್ಯಾದಲ್ಲಿನ ಸಮರವು ಹೂಡಿಕೆದಾರರ ಮೇಲೆ ಈಗಾಗಲೇ ಪರಿಣಾಮ ಬೀರಲು ಆರಂಭಿಸಿದೆ. ಅದರಲ್ಲೂ ಮುಖ್ಯವಾಗಿ ವಿದೇಶಿ ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ. ಅವರು ಇಂಧನ ಪೂರೈಕೆಯಲ್ಲಿನ ಸಮಸ್ಯೆ ಹಾಗೂ ಅರ್ಥವ್ಯವಸ್ಥೆಯ ಸ್ಥಿರತೆಯ ವಿಚಾರವಾಗಿ ಹೆಚ್ಚು ಸೂಕ್ಷ್ಮವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ ಎಂದು ವರದಿ ಹೇಳಿದೆ.

ಭಾರತವು ತನಗೆ ಬೇಕಿರುವ ಕಚ್ಚಾ ತೈಲದ ಬಹುಪಾಲನ್ನು ಆಮದು ಮಾಡಿಕೊಳ್ಳುತ್ತದೆ. ಕಚ್ಚಾ ತೈಲದ ಬೆಲೆಯಲ್ಲಿನ ಏರಿಕೆಯು ದೇಶದ ಅರ್ಥವ್ಯವಸ್ಥೆಯ ಮೇಲೆ ಭಾರಿ ಪರಿಣಾಮ ಬೀರುತ್ತದೆ.

ಕಚ್ಚಾ ತೈಲದ ಬೆಲೆ ಹೆಚ್ಚಳವಾದಲ್ಲಿ ವಿವಿಧ ವಲಯಗಳಲ್ಲಿ ತಯಾರಿಕಾ ವೆಚ್ಚ ಜಾಸ್ತಿ ಆಗುತ್ತದೆ, ಹಣದುಬ್ಬರ ಪ್ರಮಾಣ ಹೆಚ್ಚುತ್ತದೆ. ಅಲ್ಲದೆ, ಆಮದು ವೆಚ್ಚ ಕೂಡ ಜಾಸ್ತಿ ಆಗಿ ದೇಶದ ಕಂಪನಿಗಳ ಲಾಭದ ಪ್ರಮಾಣದ ಮೇಲೆ ಪರಿಣಾಮ ಆಗುತ್ತದೆ ಎಂದು ವರದಿ ಹೇಳಿದೆ.

ದೇಶದ ಹೂಡಿಕೆದಾರರು ಷೇರುಪೇಟೆಯಲ್ಲಿ ಸ್ಥಿರವಾಗಿ ಹೂಡಿಕೆ ಮಾಡುತ್ತಿರುವುದು ಹಾಗೂ ಭಾರತದ ಮಧ್ಯಮ ಅವಧಿಯ ಬೆಳವಣಿಗೆಯ ಸಾಧ್ಯತೆಯು ಮಾರುಕಟ್ಟೆಗೆ ಪೂರಕವಾಗಿ ಇವೆ. ಆದರೆ ಜಾಗತಿಕ ಮಟ್ಟದಲ್ಲಿನ ಬೆಳವಣಿಗೆಗಳ ಮೇಲೆ ಅಲ್ಪಾವಧಿಯಲ್ಲಿ ಗಮನ ಇರಿಸಬೇಕಾಗಿದೆ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.