ಬುಧವಾರ, ಜುಲೈ 15, 2020
22 °C

‘ಎಂಎಸ್‌ಎಂಇ’ಗಳಿಗೆ ₹ 3,200 ಕೋಟಿ ಸಾಲ ಮಂಜೂರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಸೋಮವಾರ ಒಂದೇ ದಿನ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ₹ 3,200 ಕೋಟಿ ಮೊತ್ತದ ಸಾಲ ಮಂಜೂರು ಮಾಡಿವೆ.

ಕೋವಿಡ್‌ನಿಂದ ತೀವ್ರವಾಗಿ ಬಾಧಿತವಾಗಿರುವ ‘ಎಂಎಸ್‌ಎಂಇ‘ ವಲಯಕ್ಕೆ ಕೇಂದ್ರ ಸರ್ಕಾರ ಪ್ರಕಟಿಸಿರುವ ₹ 3 ಲಕ್ಷ ಕೋಟಿ ಮೊತ್ತದ ತುರ್ತು ಸಾಲ ಖಾತರಿ ಯೋಜನೆಯಡಿ ಈ ಸಾಲ ಮಂಜೂರು ಮಾಡಲಾಗಿದೆ.

ಸೋಮವಾರ ಒಂದೇ ದಿನ ಸಣ್ಣ ಕೈಗಾರಿಕೆಗಳಿಗೆ ಜಾಮೀನು ರಹಿತ ₹ 3,200 ಕೋಟಿ ಮೊತ್ತದ ಸಾಲ ಮಂಜೂರು ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಟ್ವೀಟ್‌ ಮಾಡಿದೆ.

ಎರಡನೇ ಹಂತದ 3  ಸಾವಿರಕ್ಕೂ ಹೆಚ್ಚು ಪಟ್ಟಣಗಳಲ್ಲಿನ ‘ಎಂಎಸ್‌ಎಂಇ’ಗಳಿಗೆ ಸಾಲ ಮಂಜೂರು ಮಾಡಲಾಗಿದೆ. ಈ ಸಾಲವನ್ನು ಕೈಗಾರಿಕಾ ಘಟಕಗಳು ವೇತನ, ಬಾಡಿಗೆ ಪಾವತಿ ಮತ್ತು ತಯಾರಿಕಾ ಚಟುವಟಿಕೆ ಪುನರಾರಂಭ ವೆಚ್ಚಕ್ಕೆ ಬಳಸಬಹುದಾಗಿದೆ. ಈ ಸಾಲಕ್ಕೆ ಶೇ 9.25 ಬಡ್ಡಿ ದರ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.