ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾದ ನಂತರದಲ್ಲಿ ಆ ಪ್ರದೇಶಗಳಲ್ಲಿನ ಅನಿವಾಸಿ ಭಾರತೀಯರು (ಎನ್ಆರ್ಐ) ಇಲ್ಲಿನ ರಿಯಲ್ ಎಸ್ಟೇಟ್ ವಲಯದಲ್ಲಿ ಹೂಡಿಕೆಗೆ ಅವಕಾಶ ಅರಸಿ ಸಂಪರ್ಕಿಸುವುದು ಹೆಚ್ಚಾಗಿದೆ ಎಂದು ಪುರವಂಕರ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಆಶಿಷ್ ಪುರವಂಕರ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತದಲ್ಲಿ ಹೂಡಿಕೆ ಮಾಡುವ ಉದ್ದೇಶದೊಂದಿಗೆ ಮಾಹಿತಿ ಪಡೆಯಲು, ವಿಚಾರಿಸಲು ಮಾಡುವ ಕರೆಗಳು ಶೇ 50ರಷ್ಟು ಹೆಚ್ಚಾಗಿದೆ. ದಿನಕ್ಕೆ 200ಕ್ಕೂ ಹೆಚ್ಚು ಕರೆಗಳು ಬರುತ್ತಿವೆ’ ಎಂದರು ತಿಳಿಸಿದರು.

ಯುದ್ಧದ ಕಾರಣದಿಂದಾಗಿ ಕಚ್ಚಾ ತೈಲದ ಬೆಲೆಯಲ್ಲಿ ಆಗಿರುವ ಏರಿಕೆ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಪರಿಣಾಮದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಯುದ್ಧದಿಂದಾಗಿ ನಿರ್ಮಾಣ ಕೆಲಸಗಳಲ್ಲಿ ಬಳಕೆ ಮಾಡುವ ಬೇರೆ ಬೇರೆ ಉತ್ಪನ್ನಗಳ ಬೆಲೆ ಹೆಚ್ಚಳ ಆಗುತ್ತಿದೆ. ಹೀಗಾಗಿ ಮಾರಾಟಕ್ಕೆ ಇರುವ ಆಸ್ತಿಗಳ ಬೆಲೆ ಹೆಚ್ಚಳದ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ’ ಎಂದು ತಿಳಿಸಿದರು.

ಕಂಪನಿಯು ಮುಂದಿನ ಎರಡು ವರ್ಷಗಳಲ್ಲಿ ಒಟ್ಟು 30 ವಸತಿ ಯೋಜನೆಗಳನ್ನು ದೇಶದ ದಕ್ಷಿಣ ಹಾಗೂ ಪಶ್ಚಿಮ ಭಾಗಗಳಲ್ಲಿ ಆರಂಭಿಸಲಿದೆ, ಇದರಿಂದ ಅಂದಾಜು ₹35 ಸಾವಿರ ಕೋಟಿ ವರಮಾನದ ನಿರೀಕ್ಷೆ ಇದೆ ಎಂದು ಕೂಡ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.