ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

ಪುರವಣಿ
Last Updated 14 ಏಪ್ರಿಲ್ 2020, 15:17 IST
ಅಕ್ಷರ ಗಾತ್ರ

ಬಾಲಾಜಿ, ಊರು ಬೇಡ

ನಾನು ನಿಮ್ಮ ಅಭಿಮಾನಿ, ನನ್ನ ಹೆಂಡತಿ ಕೆ.ಎಸ್.ಆರ್.ಟಿ.ಸಿ. ಯಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾಳೆ. ಇನ್ನೂ 19 ವರ್ಷ ಸೇವಾವಧಿ ಇದೆ. ಎನ್.ಪಿ.ಎಸ್., ಪಿ.ಪಿ.ಎಫ್. ಖಾತೆ ಎಲ್ಲಿ ಹೇಗೆ ತೆರೆಯಬೇಕು ಎಂಬುದನ್ನು ದಯಮಾಡಿ ತಿಳಿಸಿರಿ.

ಉತ್ತರ: ಸೆಕ್ಷನ್ 80 CCD (1B) ಆಧಾರದ ಮೇಲೆ ಎನ್.ಪಿ.ಎಸ್.ನಲ್ಲಿ ಹೂಡಿದ ಗರಿಷ್ಠ ₹ 50,000, ಸೆಕ್ಷನ್ 80C ಆಧಾರದ ಮೇಲೆ ಪಿ.ಪಿ.ಎಫ್‌.ನ ಮೇಲೆ ಹೂಡಿದ ಹಣ (ಎರಡರಿಂದ ಗರಿಷ್ಠ ₹ 2 ಲಕ್ಷ) ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ಆದರೆ ನಿಮ್ಮ ಪತ್ನಿ ಆಧಾಯ ತೆರಿಗೆಗೆ ಒಳಗಾಗುವುದಿಲ್ಲ.

ಹೂಡಿಕೆ ದೃಷ್ಟಿಯಿಂದ ಇವೆರಡೂ ಉತ್ತಮವಾಗಿದ್ದು, NPSS ಹಾಗೂ PPF ಎರಡನ್ನೂ ಸ್ಟೇಟ್ ಬ್ಯಾಂಕಿನಲ್ಲಿ ಪ್ರಾರಂಭಿಸಲು ತಿಳಿಸಿರಿ. ಇವೆರಡೂ ದೀರ್ಘಾವಧಿ ಹೂಡಿಕೆಯಾಗಿದ್ದು, ಒಮ್ಮೆ ಪ್ರಾರಂಭಿಸಿ ಮಧ್ಯದಲ್ಲಿ ಎಂದಿಗೂ ನಿಲ್ಲಿಸಬೇಡಿ. ಎನ್‌ಪಿಎಸ್‌ನಲ್ಲಿ ಕಟ್ಟಿದ ಹಣವನ್ನು ನಿವೃತ್ತಿ ನಂತರ ಪಿಂಚಣಿ ರೂಪದಲ್ಲಿ ಪಡೆಯಬಹುದು. ಪಿಪಿಎಫ್‌ನಲ್ಲಿ 15 ವರ್ಷಗಳವರೆಗೆ ಹಣ ತುಂಬುತ್ತಾ ಬರಬೇಕು. ಉದ್ಯೋಗಿಗಳಿಗೆ ಪಿಎಫ್‌ ಇರುವಂತೆ, ಉಳಿದವರಿಗೆ ಪಿಪಿಎಫ್‌ ಅನುಕೂಲವಾಗಿರುತ್ತದೆ.

***
ಹೆಸರು, ಊರು ಬೇಡ

ಬೇರೆ ಊರಿನಲ್ಲಿ ನಮಗೆ ಎರಡು ಎಕರೆ ಜಾಗ ಇದೆ (ಈಗಿನ ಬೆಲೆ ₹ 87 ಲಕ್ಷ). ಈ ಜಾಗ ಮಾರಾಟ ಮಾಡಿ ಬೆಂಗಳೂರಿನಲ್ಲಿ ಕಟ್ಟಿದ ಮನೆ ಖರೀದಿಸಬೇಕೆಂದಿದ್ದೇನೆ. ಈ ಕಾರಣಕ್ಕೆ ಸಾಲ ಸಿಗಬಹುದೇ ತಿಳಿಸಿರಿ. ಗರಿಷ್ಠ ಎಷ್ಟು ಸಾಲ, ಬಡ್ಡಿ ದರ ಎಲ್ಲವನ್ನೂ ನಮಗೆ ತಿಳಿಸಿ ಕೊಡಿರಿ.

ಉತ್ತರ: ನೀವು ಬೆಂಗಳೂರಿನಲ್ಲಿ ಮನೆ ಖರೀದಿಸುವುದಾದರೆ, ಗೃಹ ಸಾಲ ದೊರೆಯುತ್ತದೆ. ಈ ಸಾಲಕ್ಕೆ ಕೊಳ್ಳುವ ಮನೆ ಅಥವಾ ನಿವೇಶನವನ್ನು ಅಡಮಾನ ಮಾಡಿದರಾಯಿತು. ಊರಿನ ಜಮೀನಿನ ಮಾರಾಟದ ಅವಶ್ಯಕತೆ ಬೀಳುವುದಿಲ್ಲ. ಎಲ್ಲಕ್ಕೂ ಮುಖ್ಯವಾಗಿ ನೀವು ಪಡೆಯುವ ಸಾಲದ ಮೊತ್ತಕ್ಕನುಗುಣವಾಗಿ, ಸಾಲ ಮರುಪಾವತಿಸುವ ಸಾಮರ್ಥ್ಯ ನಿಮ್ಮಲ್ಲಿರಬೇಕು.

ನೀವು ನೌಕರರಾದಲ್ಲಿ, ಸಂಬಳದ ಚೀಟಿ (Salary Slip) ಬೇರೆ ಉದ್ಯೋಗವಾದಲ್ಲಿ ಕಳೆದ ಮೂರು ವರ್ಷಗಳ I.T. Return ಸಲ್ಲಿಸಬೇಕು. ಸಾಲದ ಮೊತ್ತ ನಿಮ್ಮ ಅವಶ್ಯಕತೆ ಹಾಗೂ ಮರು ಪಾವತಿಸುವ ಯೋಗ್ಯತೆ ಮೇಲೆ ಹೊಂದಿಕೊಂಡಿರುತ್ತದೆ. ಇನ್ನು ಗೃಹಸಾಲದ ಬಡ್ಡಿ ಬ್ಯಾಂಕಿನಿಂದ ಬ್ಯಾಂಕಿಗೆ ವ್ಯತ್ಯಾಸವಿರುತ್ತದೆ. ಶೇ 8.5 – 10.5 ತನಕ ಗೃಹಸಾಲದ ಬಡ್ಡಿ ಇರುತ್ತದೆ. ನೀವು ನಿಜವಾಗಿ ಬೆಂಗಳೂರಿನಲ್ಲಿ ಆಸ್ತಿ ಮಾಡುವ ವಿಚಾರ ಇದ್ದರೆ, ಊರಿನಲ್ಲಿರುವ ಎರಡು ಎಕರೆ ಜಮೀನು ಮಾರಾಟ ಮಾಡಿ ಬಂದ ಹಣದಿಂದ ಇಲ್ಲಿ ಮನೆ ಕೊಳ್ಳಿರಿ. ಇದರಿಂದ ಸಾಲ ರಹಿತ ಜೀವನವಾಗುತ್ತದೆ. ಜೊತೆಗೆ ಊರಿನ ಜಮೀನು ಮಾರಾಟ ಮಾಡಿದರೂ, ಬೆಂಗಳೂರಿನಲ್ಲಿ ಒಂದು ಆಸ್ತಿ ಮಾಡಿದಂತಾಗುತ್ತದೆ. ಈ ವ್ಯವಸ್ಥೆಯಲ್ಲಿ ಕ್ಯಾಪಿಟಲ್‌ಗೇನ್ ಟ್ಯಾಕ್ಸ್ ಕೂಡ ಬರುವುದಿಲ್ಲ ಅಥವಾ ಇನ್ನಿತರ ತೆರಿಗೆಯೂ ಬರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT