ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ.ವಿ. ನವೋದ್ಯಮಗಳ ವಿರುದ್ಧ ರಾಜೀವ್ ವಾಗ್ದಾಳಿ

Last Updated 10 ಜೂನ್ 2022, 12:29 IST
ಅಕ್ಷರ ಗಾತ್ರ

ಪುಣೆ: ಬಜಾಜ್ ಆಟೊ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಅವರು ವಿದ್ಯುತ್ ಚಾಲಿತ ವಾಹನ ಕ್ಷೇತ್ರದ ನವೋದ್ಯಮ ಕಂಪನಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವು ಅನುಸರಿಸುವ ವಾಹನ ತಯಾರಿಕಾ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆ.

ಬಜಾಜ್ ಆಟೊ ಕಂಪನಿಯ ಅಂಗಸಂಸ್ಥೆ ಚೇತಕ್ ಟೆಕ್ನಾಲಜಿ ಲಿಮಿಟೆಡ್‌ನ ಇ.ವಿ. ತಯಾರಿಕಾ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ‘ಇ.ವಿ. ತಯಾರಿಕಾ ಉದ್ಯಮದಲ್ಲಿ ಇರಬಾರದವರು ಇಲ್ಲಿ ಬರಲು ಯತ್ನಿಸುತ್ತಿರುವುದು ಏಕೆ? ಇದನ್ನು ಸರಿಪಡಿಸಬೇಕು’ ಎಂದು ಹೇಳಿದ್ದಾರೆ.

‘ಬೆಂಕಿ ಹೊತ್ತಿಕೊಳ್ಳುತ್ತಿರುವುದು ಮಾತ್ರವೇ ಸಮಸ್ಯೆ ಅಲ್ಲ. ಪೆಟ್ರೋಲ್ ಎಂಜಿನ್ ಇರುವ ವಾಹನಗಳಲ್ಲಿಯೂ ಇಂತಹ ಘಟನೆಗಳು ಆಗಿವೆ. ಇಲ್ಲಿರುವುದು ವಾಹನ ತಯಾರಿಕಾ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಶ್ನೆ’ ಎಂದು ಅವರು ಹೇಳಿದ್ದಾರೆ.

‘ಇ.ವಿ.ಗಳು ಮಾರುಕಟ್ಟೆಯನ್ನು ಆವರಿಸಿಕೊಳ್ಳುತ್ತಿರುವುದಕ್ಕೆ ಒಂದು ಕಾರಣ, ಅದಕ್ಕೆ ನೀಡುತ್ತಿರುವ ಉತ್ತೇಜನ ಕೂಡ ಆಗಿರಬಹುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT