ಚನ್ನಪಟ್ಟಣ: ಕೆಎಸ್ಐಸಿ ಕಾರ್ಖಾನೆಗಳಿಂದ ಪ್ರತಿ ವರ್ಷ ಒಂದು ಲಕ್ಷ ರೇಷ್ಮೆ ಸೀರೆ ಉತ್ಪಾದಿಸಲಾಗುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ಎರಡು ಲಕ್ಷ ಸೀರೆಗಳನ್ನು ಉತ್ಪಾದಿಸಲಾಗುವುದು ಎಂದು ಕೆಎಸ್ಐಸಿ ಉಪಾಧ್ಯಕ್ಷ ಎಸ್.ಗಂಗಾಧರ್ ತಿಳಿಸಿದರು.

ನಗರದ ಕೆಎಸ್ಐಸಿ ಮಿಲ್ ಆವರಣದಲ್ಲಿರುವ ನೇಯ್ಗೆ, ನೂಲಿನ ಘಟಕಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೆಎಸ್ಐಸಿ ರೇಷ್ಮೆ ಸೀರೆಗಳಿಗೆ ಪ್ರಸ್ತುತ ಬೇಡಿಕೆ ಹೆಚ್ಚಾಗಿದೆ. ಆದರೆ ಉತ್ಪಾದನೆ ಕೊರತೆ ಇದೆ. ಸೀರೆಗಳಿಗಾಗಿ ಬೆಳಗಿನ ಜಾವದಿಂದಲೇ ಸಾಲುಗಟ್ಟಿ ನಿಂತು ಮಹಿಳೆಯರು ಖರೀದಿ ಮಾಡುತ್ತಿದ್ದಾರೆ. ಉತ್ಪಾದನೆ ಹೆಚ್ಚಿಸುವುದರಿಂದ ಸಮಸ್ಯೆ ನೀಗಲಿದೆ ಎಂದರು.

ಚನ್ನಪಟ್ಟಣ ಕಾರ್ಖಾನೆಯಲ್ಲಿ ಒಂದನೇ ನೇಯ್ಗೆ ಘಟಕದಲ್ಲಿ ಸದ್ಯ 30 ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಮತ್ತೊಂದು ಘಟಕವನ್ನು ಶೀಘ್ರವೇ ಆರಂಭಿಸಲು ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಮೂರು ತಿಂಗಳಲ್ಲಿ 400 ಮಂದಿ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗುವುದು. ಸದ್ಯ ರೇಷ್ಮೆ ಸೀರೆ, ಪಂಚೆ, ಶಲ್ಯ ತಯಾರಿ ಮಾಡಲಾಗುತ್ತಿದೆ. ಹೆಚ್ಚಿನ ಬೇಡಿಕೆ ಇರುವ ಸೀರೆಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.

ಚನ್ನಪಟ್ಟಣದ ಮಿಲ್ ಪುನಶ್ಚೇತನಕ್ಕೆ ಕೆಎಸ್ಐಸಿ ಬದ್ಧವಾಗಿದೆ. ಆವರಣದಲ್ಲಿರುವ ಹಳೆಯ ಕಟ್ಟಡಗಳನ್ನು ನೆಲಸಮಗೊಳಿಸಲು ಸೂಚಿಸಲಾಗಿದೆ. ಹಳೆಯ ಕಟ್ಟಡಗಳು ಪಾಳು ಬಿದ್ದು ಭೂತಬಂಗಲೆಯಂತಾಗಿವೆ. ಪಿಡಬ್ಲ್ಯುಡಿ ಎಂಜಿನಿಯರುಗಳಿಂದ ವರದಿ ಪಡೆದು, ಕಟ್ಟಡ ಸ್ಥಿತಿಗತಿ ಅವಲೋಕಿಸಿ ಬಳಕೆಗೆ ಯೋಗ್ಯವಾಗಿದ್ದರೆ ಉಳಿಸಿಕೊಂಡು ಇಲ್ಲವಾದಲ್ಲಿ ಕೆಡವಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೆಎಸ್ಐಸಿ ವ್ಯವಸಾಪಕಿ ಅರುಣರೆಡ್ಡಿ, ವ್ಯವಸ್ಥಾಪಕ (ನೇಮಕಾತಿ) ನವೀನ್, ಕೆಎಸ್ಐಸಿ ಘಟಕದ ವ್ಯವಸ್ಥಾಪಕ ಸತೀಶ್, ಆಪ್ತ ಕಾರ್ಯದರ್ಶಿ ಮರಿಯಪ್ಪ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-14-1151384626

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.