ಬುಧವಾರ, ಮೇ 25, 2022
30 °C

ರ್‍ಯಾಮ್ಕೊ ಸಿಮೆಂಟ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರ್‍ಯಾಮ್ಕೊ ಸಿಮೆಂಟ್‌ನ ಅಳತ್ತಿಯೂರ್ ಘಟಕಕ್ಕೆ 2021ನೇ ಸಾಲಿನ ‘ಅಪೆಕ್ಸ್ ಇಂಡಿಯಾ ಆಕ್ಯುಪೇಷನಲ್ ಹೆಲ್ತ್ ಆ್ಯಂಡ್ ಸೇಫ್ಟಿ ಗೋಲ್ಡ್‌ ಪ್ರಶಸ್ತಿ’ ಲಭಿಸಿದೆ. ಸಿಮೆಂಟ್, ವಿದ್ಯುತ್, ಉಕ್ಕು, ಆಟೊಮೊಬೈಲ್ ಸೇರಿದಂತೆ ಬೇರೆ ಬೇರೆ ವಲಯಗಳ 120ಕ್ಕೂ ಹೆಚ್ಚಿನ ಕಂಪನಿಗಳು ಪ್ರಶಸ್ತಿಗೆ ಸ್ಪರ್ಧಿಸಿದ್ದವು.

ಬೇರೆ ಬೇರೆ ಕಂಪನಿಗಳ ಪ್ರತಿನಿಧಿಗಳು ತಮ್ಮಲ್ಲಿನ ಸುರಕ್ಷತೆ ಕುರಿತು ನೀಡಿದ ವಿವರಣೆಗಳನ್ನು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಮಾಜಿ ನಿರ್ದೇಶಕ ಡಾ.ಆರ್.ಕೆ. ಸೂರಿ ಮತ್ತು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಮಾಜಿ ಮಹಾನಿರ್ದೇಶಕ ಸುಭಾಷ್ ಚಂದ್ರ ಭಾಸಿನ್ ನೇತೃತ್ವದ ಸಮಿತಿ ಪರಿಶೀಲಿಸಿತು. 

ಗೋವಾದಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು