ಭಾನುವಾರ, ಮೇ 22, 2022
28 °C

₹ 1,370 ಕೋಟಿ ಬಂಡವಾಳ ಸಂಗ್ರಹಿಸಿದ ರ್‍ಯಾಪಿಡೊ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬೈಕ್‌ ಟ್ಯಾಕ್ಸಿ ಸೇವೆ ಒದಗಿಸುವ ರ್‍ಯಾಪಿಡೊ ಕಂಪನಿಯು ‘ಸಿರೀಸ್‌ ಡಿ’ ಸುತ್ತಿನಲ್ಲಿ ಹೂಡಿಕೆದಾರರಿಂದ ಒಟ್ಟಾರೆ ₹ 1,370 ಕೋಟಿ ಬಂಡವಾಳ ಸಂಗ್ರಹ ಮಾಡಿರುವುದಾಗಿ ಶುಕ್ರವಾರ ತಿಳಿಸಿದೆ.

ಆಹಾರ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸ್ವಿಗ್ಗಿ ಕಂಪನಿಯು ಹೂಡಿಕೆದಾರರ ಸಾಲಿಗೆ ಹೊಸದಾಗಿ ಸೇರಿಕೊಂಡಿದೆ. ಟಿವಿಎಸ್‌ ಮೋಟರ್ ಕಂಪನಿ ಸೇರಿದಂತೆ ಹಾಲಿ ಹೂಡಿಕೆದಾರರಾದ ವೆಸ್ಟ್‌ಬ್ರಿಡ್ಜ್‌, ಶೆಲ್‌ ವೆಂಚರ್ಸ್‌ ಮತ್ತು ನೆಕ್ಸಸ್‌ ವೆಂಚರ್ಸ್ ಕಂಪನಿಗಳು ಸಹ ಹೂಡಿಕೆ ಮಾಡಿವೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ತಂತ್ರಜ್ಞಾನ ಅಳವಡಿಕೆ, ತಂಡವನ್ನು ಬಲಪಡಿಸುವುದು ಹಾಗೂ ಮೆಟ್ರೊ ಒಳಗೊಂಡು ಒಂದು, ಎರಡು ಮತ್ತು ಮೂರನೇ ಶ್ರೇಣಿಯ ನಗರಗಳಲ್ಲಿ ಪೂರೈಕೆಯನ್ನು ಹೆಚ್ಚಿಸಲು ಈ ಬಂಡವಾಳವನ್ನು ಬಳಸಿಕೊಳ್ಳುವುದಾಗಿ ರ್‍ಯಾಪಿಡೊ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು