ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೀರ್ಘಾವಧಿಯ ಹಣದುಬ್ಬರ ಆಧರಿಸಿ ದರ ಕಡಿತ: ಆರ್‌ಬಿಐ 

Published : 16 ಸೆಪ್ಟೆಂಬರ್ 2024, 16:01 IST
Last Updated : 16 ಸೆಪ್ಟೆಂಬರ್ 2024, 16:01 IST
ಫಾಲೋ ಮಾಡಿ
Comments

ನವದೆಹಲಿ: ಬಡ್ಡಿದರದ ಇಳಿಕೆಯ ನಿರ್ಧಾರವು ದೀರ್ಘಾವಧಿಯ ಹಣದುಬ್ಬರವನ್ನು ಆಧರಿಸಿದೆಯೇ ಹೊರತು, ಮಾಸಿಕ ಅಂಕಿ–ಅಂಶಗಳ ಮೇಲಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಸೋಮವಾರ ಹೇಳಿದ್ದಾರೆ.

ಹೆಚ್ಚಿನ ಹಣದುಬ್ಬರದಿಂದ ಆರ್‌ಬಿಐ 9ನೇ ಬಾರಿಯೂ ರೆಪೊ ದರದಲ್ಲಿ (ಶೇ 6.5) ಯಥಾಸ್ಥಿತಿ ಕಾಯ್ದುಕೊಂಡಿದೆ. ಜುಲೈನಲ್ಲಿ ಹಣದುಬ್ಬರ ಶೇ 3.6ರಷ್ಟಿತ್ತು. ಆಗಸ್ಟ್‌ನಲ್ಲಿ ಶೇ 3.7ಕ್ಕೆ ಏರಿಕೆಯಾಗಿದೆ. ಮುಂದಿನ ಆರು ತಿಂಗಳು ಇಲ್ಲವೇ ಒಂದು ವರ್ಷ ಹಣದುಬ್ಬರದ ವರದಿಯನ್ನು ನೋಡಲಾಗುವುದು. ಇದರ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಅಕ್ಟೋಬರ್ 7ರಿಂದ 9ರ ವರೆಗೆ ಆರ್‌ಬಿಐ ಗವರ್ನರ್‌ ಅಧ್ಯಕ್ಷತೆಯಲ್ಲಿ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT