ಮುಂಬೈ: ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಕಲಿ ನೋಟುಗಳ ಪತ್ತೆಯು 2025–26ರಲ್ಲಿ ಶೇ 5.7ರಷ್ಟು ಜಾಸ್ತಿ ಆಗಿದೆ ಎಂದು ಆರ್ಬಿಐ ಶುಕ್ರವಾರ ತಿಳಿಸಿದೆ.

₹500 ಹಾಗೂ ₹200 ಮುಖಬೆಲೆಯ ನಕಲಿ ನೋಟುಗಳು ಹೆಚ್ಚಿನ ಪ್ರಮಾಣದಲ್ಲಿ ಪತ್ತೆ ಆಗಿವೆ.

2024–25ರಲ್ಲಿ ಒಟ್ಟು 2.17 ಲಕ್ಷ ನಕಲಿ ನೋಟುಗಳು ಪತ್ತೆಯಾಗಿದ್ದವು. ಈ ಸಂಖ್ಯೆಯು 2025–26ರಲ್ಲಿ 2.29 ಲಕ್ಷಕ್ಕೆ ಏರಿಕೆ ಆಗಿದೆ ಎಂದು ಆರ್ಬಿಐ ವಾರ್ಷಿಕ ವರದಿಯು ಹೇಳಿದೆ.

₹500 ಮುಖಬೆಲೆಯ ನಕಲಿ ನೋಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆ ಆಗಿವೆ. ಹಿಂದಿನ ವರ್ಷದಲ್ಲಿ ಒಟ್ಟು 1.17 ಲಕ್ಷ ನೋಟುಗಳು ಸಿಕ್ಕಿದ್ದವು. ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಈ ಸಂಖ್ಯೆಯು 1.41 ಲಕ್ಷಕ್ಕೆ ಏರಿಕೆ (ಶೇ 20.5ರಷ್ಟು) ಆಗಿದೆ.

5,412 ನಕಲಿ ನೋಟುಗಳು ಆರ್ಬಿಐನಲ್ಲಿಯೇ ಪತ್ತೆಯಾಗಿವೆ. ಒಟ್ಟು 2.24 ಲಕ್ಷ ನೋಟುಗಳು ಇತರ ಬ್ಯಾಂಕ್ಗಳಲ್ಲಿ ಪತ್ತೆಯಾಗಿವೆ. ಪೊಲೀಸರು ಹಾಗೂ ಇತರ ಕಾನೂನು ಜಾರಿಗೆ ಸಂಸ್ಥೆಗಳು ವಶಪಡಿಸಿಕೊಂಡ ನಕಲಿ ನೋಟುಗಳು ಈ ಸಂಖ್ಯೆಯಲ್ಲಿ ಸೇರಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.