ಬಡ್ಡಿದರ ಕಡಿತದ ಲಾಭ ಜನರಿಗೇಕೆ ಸಿಕ್ಕಿಲ್ಲ: ‘ಸುಪ್ರೀಂ’

7

ಬಡ್ಡಿದರ ಕಡಿತದ ಲಾಭ ಜನರಿಗೇಕೆ ಸಿಕ್ಕಿಲ್ಲ: ‘ಸುಪ್ರೀಂ’

Published:
Updated:
Deccan Herald

ನವದೆಹಲಿ: ಬಡ್ಡಿದರ ಕಡಿತದ ಲಾಭವನ್ನು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ವರ್ಗಾಯಿಸದಿರಲು ಕಾರಣವೇನು ಎಂದು ಸುಪ್ರೀಂ ಕೋರ್ಟ್, ಭಾರತೀಯ ರಿಸರ್ವ್‌ ಬ್ಯಾಂಕ್‌ ಅನ್ನು (ಆರ್‌ಬಿಐ) ಪ್ರಶ್ನಿಸಿದೆ.

ಬದಲಾಗುವ ಬಡ್ಡಿದರದಲ್ಲಿ ಸಾಲ ಪಡೆದ ಗ್ರಾಹಕರಿಗೆ ಬ್ಯಾಂಕ್‌ಗಳು ಬಡ್ಡಿದರ ಕಡಿತದ ಲಾಭವನ್ನು ವರ್ಗಾಯಿಸುತ್ತಿಲ್ಲ ಎಂದು ಆರೋಪಿಸಿ ಮನಿಲೈಫ್‌ ಫೌಂಡೇಶನ್‌ ಎಂಬ ಸಂಸ್ಥೆ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ಸಲ್ಲಿಸಿತ್ತು.

ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ಆರ್‌ಬಿಐ ರೆಪೊ ದರವನ್ನು ನಿಗದಿ ಮಾಡುತ್ತದೆ. ಅದರ ಮೇಲೆ ಗೃಹಸಾಲ, ವಾಹನ ಸಾಲಗಳ ಮೇಲಿನ ಬಡ್ಡಿದರಗಳು ನಿರ್ಧಾರವಾಗುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !