ಮುಂಬೈ: ಎಚ್ಡಿಎಫ್ಸಿ ಬ್ಯಾಂಕ್ನ ಮೇಲ್ವಿಚಾರಣೆಯ ಸಂದರ್ಭದಲ್ಲಿ ಆಡಳಿತಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

ಎಚ್ಡಿಎಫ್ಸಿ ಬ್ಯಾಂಕ್ನ ಅಧ್ಯಕ್ಷ ಸ್ಥಾನಕ್ಕೆ ಅತನು ಚಕ್ರವರ್ತಿ ದಿಢೀರನೆ ರಾಜೀನಾಮೆ ನೀಡಿದ್ದ ವಿಚಾರದ ಕುರಿತು ಪತ್ರಕರ್ತರು ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ‘ಬ್ಯಾಂಕ್ನ ಸಭೆಗಳ ವಿವರಗಳನ್ನು ಕೂಡ ಪರಿಶೀಲಿಸಲಾಗಿದೆ. ಅಲ್ಲಿ ಗಂಭೀರವಾದ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ’ ಎಂದಿದ್ದಾರೆ.

‘ಎಚ್ಡಿಎಫ್ಸಿ ಬ್ಯಾಂಕ್ ದೇಶದ ವ್ಯವಸ್ಥೆಯ ಪಾಲಿಗೆ ಮಹತ್ವದ ಬ್ಯಾಂಕ್ ಆಗಿದೆ. ಅಲ್ಲಿ ಹಣಕಾಸಿನ ಸ್ಥಿತಿ ಚೆನ್ನಾಗಿದೆ, ವೃತ್ತಿಪರವಾದ ಆಡಳಿತ ಮಂಡಳಿಯು ಅಲ್ಲಿದೆ. ಕಾಲಕಾಲಕ್ಕೆ ನಾವು ನಡೆಸುವ ಪರಿಶೀಲನೆಗಳ ಪ್ರಕಾರ ಅಲ್ಲಿ ಗಂಭೀರವಾದ ಸಮಸ್ಯೆಗಳು ಯಾವುದೂ ಇಲ್ಲ’ ಎಂದು ಆರ್ಬಿಐ ಈ ಹಿಂದೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.