ಬುಧವಾರ, ಮಾರ್ಚ್ 29, 2023
24 °C

ಭಾರತದ ಬ್ಯಾಂಕಿಂಗ್ ವ್ಯವಸ್ಥೆ ದೃಢ: ಶಕ್ತಿಕಾಂತ ದಾಸ್

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಆಸ್ತಿ ಹಾಗೂ ಹೊರೆ ನಡುವೆ ಅಸಮತೋಲನ ಹೆಚ್ಚಾಗದಂತೆ ಬ್ಯಾಂಕ್‌ಗಳು ನಿಗಾ ವಹಿಸಬೇಕು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕಿವಿಮಾತು ಹೇಳಿದ್ದಾರೆ. ಅಮೆರಿಕದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬಿಕ್ಕಟ್ಟು ಮೂಡುವುದಕ್ಕೆ ಅಸಮತೋಲನವು ಕಾರಣವಾಗಿರಬಹುದು ಎಂದು ಅವರು ಅಂದಾಜು ಮಾಡಿದ್ದಾರೆ.

ಕೊಚ್ಚಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ದೇಶದ ಬ್ಯಾಂಕಿಂಗ್ ವ್ಯವಸ್ಥೆಯು ದೃಢವಾಗಿದೆ, ಹಣದುಬ್ಬರದ ಕೆಟ್ಟ ದಿನಗಳು ಮುಗಿದಿವೆ’ ಎಂದು ಹೇಳಿದ್ದಾರೆ.

ಅಮೆರಿಕದ ಡಾಲರ್‌ ಮೌಲ್ಯವು ಹೆಚ್ಚುತ್ತಲೇ ಇರುವುದು ರಾಷ್ಟ್ರಗಳ ಸಾಲ ಮರುಪಾವತಿ ಸಾಮರ್ಥ್ಯದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಬಹುದು ಎಂಬ ಆತಂಕದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ದಾಸ್, ‘ಇಲ್ಲಿ ನಾವು ಭಯಪಡಬೇಕಾದ ಅಗತ್ಯವಿಲ್ಲ. ನಮ್ಮ ವಿದೇಶಿ ಸಾಲವು ನಿಭಾಯಿಸಬಹುದಾದ ಮಟ್ಟದಲ್ಲಿ ಇದೆ. ಹೀಗಾಗಿ ಡಾಲರ್ ಮೌಲ್ಯ ವೃದ್ಧಿಯು ನಮಗೆ ಯಾವುದೇ ಸಮಸ್ಯೆಯನ್ನು ತರುವುದಿಲ್ಲ’ ಎಂದಿದ್ದಾರೆ.

ಕ್ರಿಪ್ಟೊಕರೆನ್ಸಿಗಳು ಹಣಕಾಸು ವ್ಯವಸ್ಥೆಗೆ ಒಡ್ಡುವ ಅಪಾಯಗಳನ್ನು ಕೂಡ ಅಮೆರಿಕದಲ್ಲಿನ ಬ್ಯಾಂಕಿಂಗ್ ಬಿಕ್ಕಟ್ಟು ಸ್ಪಷ್ಟವಾಗಿ ತೋರಿಸುತ್ತಿದೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು