ಮಂಗಳವಾರ, ಡಿಸೆಂಬರ್ 1, 2020
19 °C

ಹಣದುಬ್ಬರ ಹೆಚ್ಚಳ, ದರ ಕಡಿತ ಅನುಮಾನ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಮುಂಬೈ: ಆರ್ಥಿಕ ಬೆಳವಣಿಗೆ ಕಂಡುಬರುತ್ತಿರುವುದರಿಂದ, ಹಣದುಬ್ಬರ ದರವು ಹೆಚ್ಚಿನ ಮಟ್ಟದಲ್ಲಿ ಇರುವುದರಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ) ರೆಪೊ ದರದಲ್ಲಿ ಇನ್ನಷ್ಟು ಕಡಿತ ಮಾಡಲು ಅವಕಾಶ ಸಿಗಲಿಕ್ಕಿಲ್ಲ ಎಂದು ಅರ್ಥಶಾಸ್ತ್ರಜ್ಞರು ಮತ್ತು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕೈಗಾರಿಕಾ ಉತ್ಪಾದನೆಯು ಏರಿಕೆ ದಾಖಲಿಸಿದೆ. ಆರು ತಿಂಗಳ ಅವಧಿಯಲ್ಲಿ ಇದು ಏರಿಕೆ ಕಂಡಿದ್ದು ಇದೇ ಮೊದಲು. ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಆಗುತ್ತಿರುವುದು, ಇಂಧನ ಬಳಕೆ ಹೆಚ್ಚುತ್ತಿರುವುದು ಕೂಡ ಅರ್ಥ ವ್ಯವಸ್ಥೆಯ ಚೇತರಿಕೆಯ ವಿಚಾರದಲ್ಲಿ ಒಳ್ಳೆಯ ಲಕ್ಷಣಗಳು ಎಂದು ತಜ್ಞರು ಹೇಳಿದ್ದಾರೆ.

ಹಣದುಬ್ಬರ ದರವು ಅಕ್ಟೋಬರ್‌ ತಿಂಗಳಿನಲ್ಲಿ ಶೇಕಡ 7ಕ್ಕಿಂತ ಹೆಚ್ಚಾಗಿರುವ ಕಾರಣ, ರೆಪೊ ದರ ಕಡಿತ ಮಾಡುವ ಈಗಿನ ಪ್ರಕ್ರಿಯೆಯು ಕೊನೆಗೊಳ್ಳುವ ಹಂತದಲ್ಲಿದೆ ಎಂಬ ಅಭಿಪ್ರಾಯ ಹೆಚ್ಚೆಚ್ಚು ವ್ಯಕ್ತವಾಗುತ್ತಿದೆ. ‘ಆರ್‌ಬಿಐ ನಿಗದಿ ಮಾಡಿಕೊಂಡಿದ್ದ ಗರಿಷ್ಠ ಮಟ್ಟಕ್ಕಿಂತ ಹೆಚ್ಚಿನ ಹಣದುಬ್ಬರ ದಾಖಲಾಗಿದೆ. ಈ ಸಂದರ್ಭದಲ್ಲಿ ರೆಪೊ ದರಗಳನ್ನು ಹೆಚ್ಚಿಸುವ ಯೋಚನೆ ಮಾಡಬೇಕು’ ಎಂದು ಬ್ಯಾಂಕ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞರ ಸಮೀರ್ ನಾರಂಗ್ ಹೇಳಿದರು.

ಆರ್ಥಿಕತೆ ಚೇತರಿಕೆಯ ಹಾದಿಗೆ ಮರಳುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಆರ್‌ಬಿಐ ಈಚೆಗೆ ಹೇಳಿರುವ ಮಾತನ್ನು ಕೆಲವು ವಿಶ್ಲೇಷಕರು, ‘ಬೆಳವಣಿಗೆಗೆ ಇಂಬು ಕೊಡಲು ಬ್ಯಾಂಕ್‌ ಹೆಚ್ಚಿನ ಕ್ರಮವನ್ನೇನೂ ಕೈಗೊಳ್ಳಬೇಕಾಗಿರಲಿಕ್ಕಿಲ್ಲ’ ಎಂದು ಅರ್ಥೈಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು