ಟ್ರೂಬ್ಯಾಲನ್ಸ್‌: ಬಿಲ್‌ ಪಾವತಿ ಸುಲಭ

7

ಟ್ರೂಬ್ಯಾಲನ್ಸ್‌: ಬಿಲ್‌ ಪಾವತಿ ಸುಲಭ

Published:
Updated:

ಬೆಂಗಳೂರು: ಡಿಜಿಟಲ್‌ ವಾಲೆಟ್‌ ಸಂಸ್ಥೆ ಟ್ರೂಬ್ಯಾಲನ್ಸ್‌, ಭಾರತೀಯ ರಿಸರ್ವ್‌ ಬ್ಯಾಂಕ್‌ ಅಭಿವೃದ್ಧಿಪಡಿಸಿರುವ ಭಾರತ್‌ ಬಿಲ್‌ ಪೇಮೆಂಟ್‌ ಆಪರೇಟಿಂಗ್‌ ಯುನಿಟ್‌ (ಬಿಬಿಪಿಒಯು) ಜತೆ ಒಪ್ಪಂದ ಮಾಡಿಕೊಂಡಿದೆ.

ಬಳಕೆದಾರರು ವಿವಿಧ ಸೇವೆಗಳ ಶುಲ್ಕವನ್ನು ಸುಲಭ ಮತ್ತು ತ್ವರಿತವಾಗಿ ಪಾವತಿಸಲು ಇದರಿಂದ ಸಾಧ್ಯವಾಗಲಿದೆ. ಸೇವೆಗಳ ಶುಲ್ಕ ಪಾವತಿಗೆ ಟ್ರೂಬ್ಯಾಲನ್ಸ್‌ ಮೊಬೈಲ್‌ ವಾಲೆಟ್‌ ಬಳಸುವುದರಿಂದ ಶುಲ್ಕ ಪಾವತಿಯಲ್ಲಿ ಬಳಕೆದಾರರಿಗೆ ಹಲವಾರು ಅನುಕೂಲತೆಗಳು ದೊರೆಯಲಿವೆ.

ದರ ಕಡಿತ, ಶುಲ್ಕ ಪಾವತಿ ಬಗ್ಗೆ ನೆನಪಿಸುವ ಮತ್ತು ಸುಲಭವಾಗಿ ರೀಚಾರ್ಜ್‌ (ಒನ್‌ ಟ್ಯಾಪ್‌) ಮಾಡುವಂತಹ ಸೌಲಭ್ಯಗಳು ಸಿಗಲಿವೆ. ಕೇಂದ್ರೀಕೃತ ಬಿಲ್‌ ಪಾವತಿ ಸೇವೆಯಾಗಿರುವ ಬಿಬಿಪಿಒಯು, ಬಳಕೆದಾರರು ಮೊಬೈಲ್‌, ಎಲ್‌ಪಿಜಿ, ವಿದ್ಯುತ್‌ ಬಿಲ್‌ನಂತಹ ಪ್ರತಿ ತಿಂಗಳೂ ಬರುವ ಬಹುಬಗೆಯ ಬಿಲ್‌ಗಳನ್ನು ಸರಳ ರೀತಿಯಲ್ಲಿ ಪಾವತಿಸಬಹುದು. ಇಲ್ಲಿ ಬಿಲ್ ಪಾವತಿಸಿದರೆ ತಕ್ಷಣ ಆ ಬಿಲ್‌ ಪಾವತಿ ಆಗಿರುವುದನ್ನು ವಿವಿಧ ಏಜೆಂಟರ ಮೂಲಕ ಖಚಿತಪಡಿಸುವ ವ್ಯವಸ್ಥೆಯೂ ಇಲ್ಲಿ ಇದೆ.

‘ಟ್ರೂಬ್ಯಾಲನ್ಸ್ ಈಗ ಸಮಗ್ರ ಪಾವತಿ ಆ್ಯಪ್‌ ಆಗಿದೆ’ ಎಂದು ಟ್ರೂಬ್ಯಾಲನ್ಸ್‌ನ ಸಿಇಒ ಚಾರ್ಲಿ ಲೀ ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !