ಗುರುವಾರ , ಡಿಸೆಂಬರ್ 5, 2019
24 °C

ಆರ್‌ಬಿಐ: ರೆಪೊ ದರ ಶೇ 0.25 ಕಡಿತ ನಿರೀಕ್ಷೆ

Published:
Updated:
Prajavani

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ ಗುರುವಾರ ಪ್ರಕಟಿಸಲಿರುವ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ತನ್ನ ಅಲ್ಪಾವಧಿ ಬಡ್ಡಿ (ರೆಪೊ) ದರಗಳನ್ನು ಸತತ ಆರನೇ ಬಾರಿಗೆ ಕಡಿತಗೊಳಿಸುವ ನಿರೀಕ್ಷೆ ಇದೆ.

ಆರ್ಥಿಕ ವೃದ್ಧಿ ದರವು ದ್ವಿತೀಯ ತ್ರೈಮಾಸಿಕದಲ್ಲಿ 2013ರ ಮಾರ್ಚ್‌ ತಿಂಗಳಿನಿಂದೀಚೆಗೆ ಅತಿ ಕಡಿಮೆ ಮಟ್ಟಕ್ಕೆ (ಶೇ 4.5) ಕುಸಿದಿದೆ. ಹೀಗಾಗಿ ಆರ್ಥಿಕತೆಗೆ ಉತ್ತೇಜನ ನೀಡಲು ರೆಪೊ ದರವನ್ನು ಶೇ 0.25ರಷ್ಟು ತಗ್ಗಿಸುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾದ ಷೇರು ದಲ್ಲಾಳಿ ಸಂಸ್ಥೆ ಮ್ಯಾಕ್ವೈರ್‌ ತಿಳಿಸಿದೆ.

ಈ ಹಣಕಾಸು ವರ್ಷದಲ್ಲಿ ಆರ್‌ಬಿಐ, ಇದುವರೆಗೆ ಶೇ 1.35ರಷ್ಟು ಬಡ್ಡಿ ದರಗಳನ್ನು ತಗ್ಗಿಸಿದೆ. ಆದರೆ, ಬ್ಯಾಂಕ್‌ಗಳು ಬಡ್ಡಿ ಕಡಿತದ ಶೇ 0.29ರಷ್ಟು ಪ್ರಯೋಜನವನ್ನು ಮಾತ್ರ ಗ್ರಾಹಕರಿಗೆ ವರ್ಗಾಯಿಸಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು