ಭಾನುವಾರ, ಜೂಲೈ 5, 2020
23 °C

ಹೂಡಿಕೆದಾರರ ವಿಶ್ವಾಸ ಹೆಚ್ಚಿಸಿದ ಕ್ರಮ: ಮಾರುಕಟ್ಟೆ ಪರಿಣತರ ವಿಶ್ಲೇಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮ್ಯೂಚುವಲ್ ಫಂಡ್‌ ಉದ್ದಿಮೆಗೆ ₹ 50 ಸಾವಿರ ಕೋಟಿ ವಿಶೇಷ ನೆರವು ನೀಡಲು ಮುಂದಾದ ಆರ್‌ಬಿಐ ನಿರ್ಧಾರವು ಹೂಡಿಕೆದಾರರ ವಿಶ್ವಾಸ ವೃದ್ಧಿಸಲಿದ್ದು, ಕಾರ್ಪೊರೇಟ್‌ ಸಾಲ ಮಾರುಕಟ್ಟೆಯಲ್ಲಿನ ಒತ್ತಡ ತಗ್ಗಿಸಲಿದೆ ಎಂದು ಪರಿಣತರು ವಿಶ್ಲೇಷಿಸಿದ್ದಾರೆ.

‘ಮಾರುಕಟ್ಟೆಯು ಸಹಜವಾಗಿ ಕಾರ್ಯನಿರ್ವಹಿಸಲು ಮತ್ತು ಹೂಡಿಕೆದಾರರಲ್ಲಿ ಆತ್ಮವಿಶ್ವಾಸ ಮೂಡಿಸುವ ಉತ್ತಮ ನಡೆ ಇದಾಗಿದೆ’ ಎಂದು ಭಾರತದ ಮ್ಯೂಚುವಲ್‌ ಫಂಡ್‌ ಸಂಘಗಳ (ಎಎಂಎಫ್‌ಐ) ಅಧ್ಯಕ್ಷ ನಿಲೇಶ್ ಶಾ ಪ್ರತಿಕ್ರಿಯಿಸಿದ್ದಾರೆ.

‘ಮ್ಯೂಚುವಲ್‌ ಫಂಡ್‌ ಹೂಡಿಕೆದಾರರಿಗೆ ಹಿತಾನುಭವ ನೀಡಲಿದ್ದು, ಹಣಕಾಸು ಸ್ಥಿರತೆ ಕಾಯ್ದುಕೊಳ್ಳಲು ನೆರವಾಗಲಿದೆ’ ಎಂದು ಈಕ್ವಿರಸ್‌ ವೆಲ್ತ್‌ನ ಸಿಇಒ ಅಂಕುರ್‌ ಮಹೇಶ್ವರಿ ಹೇಳಿದ್ದಾರೆ.

ಆಡಳಿತ ಮಂಡಳಿ ವಶಕ್ಕೆ ಒತ್ತಾಯ: ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಆಡಳಿತ ಮಂಡಳಿ ವಶಕ್ಕೆ ತೆಗೆದುಕೊಂಡು ಅದರ ಹೂಡಿಕೆ ನಿರ್ಧಾರಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿ ರಚಿಸಲು  ರಾಷ್ಟ್ರೀಯ ಷೇರುಪೇಟೆ ಸದಸ್ಯರ ಸಂಘವು (ಎಎನ್‌ಎಂಐ) ಸರ್ಕಾರವನ್ನು ಒತ್ತಾಯಿಸಿದೆ.

ಹೂಡಿಕೆದಾರರ ಸಂಪತ್ತು ಕರಗದಂತೆ ಕ್ರಮ ಕೈಗೊಂಡು ಅವರ ಹಿತರಕ್ಷಣೆ ಮಾಡಬೇಕು, ಹೂಡಿಕೆದಾರರ ಹಣ ಮರಳಿಸಲು ಕಾಲಮಿತಿ ನಿಗದಿಪಡಿಸಬೇಕು ಎಂದು ಆಗ್ರಹಿಸಿದೆ. ಈ ಸಂಘವು 900 ಷೇರು ದಲ್ಲಾಳಿಗಳನ್ನು ಪ್ರತಿನಿಧಿಸುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು