ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐನಿಂದ ರೆಪೊ ದರ ಶೇ.0.35ರಷ್ಟು ಏರಿಕೆ, ಸಾಲ ಮತ್ತಷ್ಟು ದುಬಾರಿ!

Last Updated 7 ಡಿಸೆಂಬರ್ 2022, 6:37 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೊ ದರವನ್ನು ತಕ್ಷಣದಿಂದ ಶೇ.0.35ರಷ್ಟು ಹೆಚ್ಚಿಸಿದೆ.
ರೆಪೊ ದರವನ್ನು 35 ಮೂಲಾಂಶ, ಅಂದರೆ ಶೇ.6.25ಕ್ಕೆ ಹೆಚ್ಚಿಸಲು ಆರ್‌ಬಿಐನ ಹಣಕಾಸು ನೀತಿ ಸಮಿತಿ(ಎಂಪಿಸಿ) ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.

ಆರ್‌ಬಿಐ ಈಗಾಗಲೇ ರೆಪೊ ದರವನ್ನು ಮೂರು ಬಾರಿ ಶೇ 0.50ರಂತೆ ಹೆಚ್ಚಿಸಿತ್ತು. ಚಿಲ್ಲರೆ ಹಣದುಬ್ಬರವು ಕಡಿಮೆ ಆಗುತ್ತಿರುವುದರಿಂದ ಹಾಗೂ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಸಲುವಾಗಿ ರೆಪೊ ದರವನ್ನು ಶೇ 0.25 ರಿಂದ ಶೇ 0.35ರವರೆಗೆ ಹೆಚ್ಚಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು.

ಈ ದರ ಏರಿಕೆಯಿಂದ ವಿವಿಧ ಸಾಲಗಳ ಮೇಲಿನ ಬಡ್ಡಿ ದರ ಕೂಡ ಹೆಚ್ಚಲಿದೆ.2023ನೇ ಆರ್ಥಿಕ ವರ್ಷದ ಜಿಡಿಪಿ ಬೆಳವಣಿಗೆ ನಿರೀಕ್ಷೆ ಶೇ.7ರಿಂದ ಶೇ.6.8ಕ್ಕೆ ಕುಸಿದಿದೆ. ಆದಾಗ್ಯೂ ಉತ್ಪಾದನೆ ಮತ್ತು ಮೂಲಸೌಕರ್ಯ ಕ್ಷೇತ್ರದ ಬೆಳವಣಿಗೆ ಆಶಾದಾಯಕವಾಗಿವೆ ಎಂದು ಆರ್‌ಬಿಐ ಹೇಳಿದೆ.


‘ಕೃಷಿ ಕ್ಷೇತ್ರವು ಚೇತರಿಸಿಕೊಳ್ಳುತ್ತಿದೆ. ನವೆಂಬರ್‌ನಲ್ಲಿ ಭಾರತದ ಉತ್ಪಾದನೆ, ಸೇವೆಗಳ ಪಿಎಂಐ ವಿಶ್ವದಲ್ಲೇ ಗರಿಷ್ಟ. ಮುಂದಿನ ದಿನಗಳಲ್ಲಿ ಹೂಡಿಕೆ ಚಟುವಟಿಕೆಗಳಿಗೆ ಸರ್ಕಾರದಿಂದ ಉತ್ತೇಜನ ದೊರೆಯಲಿದೆ’ ಎಂದು ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.

ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ ಭಾರತದ ಬೆಳವಣಿಗೆ ಸ್ಥಿರವಾಗಿದೆ. ಆದಾಗ್ಯೂ ಹಣದುಬ್ಬರದ ವಿರುದ್ಧ ಹೋರಾಟ ನಿಂತಿಲ್ಲ. ಆಹಾರ ಕೊರತೆ ಮತ್ತು ಅತಿಯಾದ ಇಂಧನ ದರ ಗ್ರಾಹಕ ವಲಯಕ್ಕೆ ಪರಿಣಾಮ ಬೀರಿದೆ. ರಷ್ಯಾ – ಉಕ್ರೇನ್ ಯುದ್ಧದ ಬಳಿಕ ಜಾಗತಿಕ ಹಣದುಬ್ಬರ ಪ್ರಮಾಣ ಅತಿಯಾಗಿ ಏರಿಕೆ ಕಂಡಿದೆ ಎಂದು ಸಮಿತಿ ತನ್ನ ನಿರ್ಣಯದಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT