'ಡಿಜಿಟಲ್‌ ಪಾವತಿ’ ವಿಶೇಷ ಸಮಿತಿಯ ಅಧ್ಯಕ್ಷರಾಗಿ ನಂದನ್‌ ನಿಲೇಕಣಿ ನೇಮಕ

7

'ಡಿಜಿಟಲ್‌ ಪಾವತಿ’ ವಿಶೇಷ ಸಮಿತಿಯ ಅಧ್ಯಕ್ಷರಾಗಿ ನಂದನ್‌ ನಿಲೇಕಣಿ ನೇಮಕ

Published:
Updated:

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ’ಡಿಜಿಟಲ್‌ ಪಾವತಿ’ ವಿಶೇಷ ಸಮಿತಿಯ ಅಧ್ಯಕ್ಷರನ್ನಾಗಿ ನಂದನ್‌ ನಿಲೇಕಣಿ ಅವರನ್ನು ಮಂಗಳವಾರ ನೇಮಕ ಮಾಡಿದೆ.

ದೇಶದಲ್ಲಿ ಡಿಜಿಟಲ್ ಪಾವತಿ ಕುರಿತಂತೆ ಈ ವಿಶೇಷ ಸಮಿತಿ ನೂತನ ಯೋಜನೆಗಳು, ಡಿಜಿಟಲ್‌ ಪಾವತಿಯ ಸಾಧಕ–ಬಾಧಕಗಳು, ಡಿಜಿಟಲ್‌ ಪಾವತಿಯ ಭದ್ರತೆ ಬಗ್ಗೆ ಅಳವಾಗಿ ಅಧ್ಯಯನ ಮಾಡಲಿದೆ. ಡಿಜಿಟಲ್ ಪಾವತಿ ಕುರಿತಂತೆ ಸಲಹೆ ಸೂಚನೆಗಳನ್ನು ಈ ಸಮಿತಿ ನೀಡಲಿದೆ. 

ಈ ವಿಶೇಷ ಸಮಿತಿಯಲ್ಲಿ ನಾಲ್ವರು ಸದಸ್ಯರು ಇರಲಿದ್ದಾರೆ. ಸಮಿತಿಯ ಸದಸ್ಯರಾಗಿ ಎಚ್‌.ಆರ್‌.ಖಾನ್‌, ಕಿಶೋರ್ ಸಾಂಸಿ, ಅರುಣಾ ಶರ್ಮಾ, ಸಂಜಯ್‌ ಜೈನ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !