ಗುರುವಾರ , ಫೆಬ್ರವರಿ 20, 2020
19 °C

ಹೊಸ ಪ್ರಿಪೇಯ್ಡ್‌ ಕಾರ್ಡ್‌ಗೆ ಚಿಂತನೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ₹10 ಸಾವಿರದ ಮೊತ್ತದವರೆಗೆ ಸರಕು ಮತ್ತು ಸೇವೆಗಳನ್ನು ಖರೀದಿಸಲು ಬಳಸಬಹುದಾದ ಹೊಸ ಪ್ರಿಪೇಯ್ಡ್‌ ಕಾರ್ಡ್‌ (ಪ್ರಿಪೇಯ್ಡ್‌ ಪೇಮೆಂಟ್‌ ಇನ್ಸ್‌ಟ್ರುಮೆಂಟ್‌–ಪಿಪಿಐ) ಜಾರಿಗೆ ತರಲು ಆರ್‌ಬಿಐ ಉದ್ದೇಶಿಸಿದೆ.

ನಗದುರಹಿತ (ಡಿಜಿಟಲ್‌) ಪಾವತಿ ವ್ಯವಸ್ಥೆಯಲ್ಲಿ ‘ಪಿಪಿಐ’ಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿವೆ. ಹೊಸ ‘ಪಿಪಿಐ’, ಡಿಜಿಟಲ್‌ ವಹಿವಾಟನ್ನು ಇನ್ನಷ್ಟು ಉತ್ತೇಜಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ‘ಪಿಪಿಐ’ಗಳಿಗೆ ಬ್ಯಾಂಕ್‌ ಖಾತೆಗಳಿಂದ ಮಾತ್ರ ಹಣ ಭರ್ತಿ ಮತ್ತು ಮರುಭರ್ತಿ ಮಾಡಲು ಅವಕಾಶ ಇರಲಿದೆ. ಬಿಲ್‌ ಪಾವತಿ ಮತ್ತು ವ್ಯಾಪಾರಿ ಮಳಿಗೆಗಳಲ್ಲಿನ ಸರಕುಗಳ ಖರೀದಿಗೆ ಇದನ್ನು ಬಳಸಬಹುದು. ಇದೇ 31ರಂದು ಈ ಕಾರ್ಡ್‌ಗಳ ಸಂಬಂಧ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಲಾಗುವುದು ಎಂದು ಆರ್‌ಬಿಐ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು