ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 1.2 ಲಕ್ಷ ಕೋಟಿ ನೋಟು ಹೊಸದಾಗಿ ಚಲಾವಣೆ

Last Updated 17 ಏಪ್ರಿಲ್ 2020, 19:00 IST
ಅಕ್ಷರ ಗಾತ್ರ

ಮುಂಬೈ: 45 ದಿನಗಳಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಹಣಕಾಸು ವ್ಯವಸ್ಥೆಯಲ್ಲಿ ₹ 1.2 ಲಕ್ಷ ಕೋಟಿ ಮೊತ್ತದ ನೋಟುಗಳನ್ನು ಹೊಸದಾಗಿ ಚಲಾವಣೆಗೆ ಬಿಡುಗಡೆ ಮಾಡಿದೆ.

‘ಕೋವಿಡ್‌–19’ ಪಿಡುಗು ವ್ಯಾಪಿಸಿದ ನಂತರದ ಬಿಕ್ಕಟ್ಟಿನ ದಿನಗಳಲ್ಲಿ ಜನರು ಬಳಿಯಲ್ಲಿ ನಗದು ಇಟ್ಟುಕೊಳ್ಳಲು ಹೆಚ್ಚು ಹಣವನ್ನು ಬ್ಯಾಂಕ್‌ ಖಾತೆಗಳಿಂದ ಹಿಂದೆ ಪಡೆಯಲು ಒಲವು ತೋರಿದ್ದಾರೆ. ನೋಟುಗಳಿಗೆ ಹೆಚ್ಚಿದ ಬೇಡಿಕೆ ಕಾರಣಕ್ಕೆ ಆರ್‌ಬಿಐನ ಪ್ರಾದೇಶಿಕ ಕಚೇರಿಗಳು ಮಾರ್ಚ್‌ 1ರಿಂದ ಏಪ್ರಿಲ್‌ 14ರ ಅವಧಿಯಲ್ಲಿ ದೇಶದಾದ್ಯಂತ ಇರುವ ಕರೆನ್ಸಿ ಚೆಸ್ಟ್‌ಗಳಿಗೆ ಹೊಸದಾಗಿ ₹ 1.2 ಲಕ್ಷ ಕೋಟಿ ಮೊತ್ತದ ನೋಟುಗಳನ್ನು ಪೂರೈಸಿವೆ’ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ವಿವರಣೆ ನೀಡಿದ್ದಾರೆ.

‘ದಿಗ್ಬಂಧನ ಅವಧಿಯಲ್ಲಿ ಸಾಗಣೆಗೆ ತೀವ್ರ ಅಡಚಣೆ ಎದುರಾಗಿದ್ದರೂ ಎಟಿಎಂಗಳಲ್ಲಿ ನಿಯಮಿತವಾಗಿ ನಗದು ಭರ್ತಿ ಮಾಡಲು ಬ್ಯಾಂಕ್‌ಗಳು ಮುತುವರ್ಜಿ ವಹಿಸಿದ್ದವು. ಇಂಟರ್‌ನೆಟ್‌ ಅಥವಾ ಮೊಬೈಲ್‌ ಬ್ಯಾಂಕಿಂಗ್‌ ವಹಿವಾಟಿನಲ್ಲಿ ಯಾವುದೇ ಇಳಿಕೆ ಕಂಡು ಬಂದಿಲ್ಲ.

‘ವಹಿವಾಟಿಗೆ ಯಾವುದೇ ಬಗೆಯಲ್ಲಿ ಧಕ್ಕೆಯಾಗದ ರೀತಿಯಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸಿವೆ. ಆರ್‌ಬಿಐನ 150 ಅಧಿಕಾರಿಗಳು ಪ್ರತ್ಯೇಕ ತಾಣದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ನೋಟುಗಳ ಚಲಾವಣೆ, ರಿಟೇಲ್‌ – ಸಗಟು ಪಾವತಿ, ಹಣಕಾಸು ಮಾರುಕಟ್ಟೆ ಹಾಗೂ ನಗದು ನಿರ್ವಹಣೆ ಮುಂತಾದವುಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ’ ಎಂದು ದಾಸ್‌ ಹೇಳಿದ್ದಾರೆ.

ಮಾರ್ಚ್‌ನಲ್ಲಿ ನೋಟುಗಳ ಚಲಾವಣೆಯಲ್ಲಿ ₹ 86 ಸಾವಿರ ಕೋಟಿ ಹೆಚ್ಚಳ ಕಂಡು ಬಂದಿದೆ ಎಂದು ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT