ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ಡಿ ದರ ಹೆಚ್ಚಳ: ಬ್ಯಾಂಕ್‌ಗಳ ಸಾಲ ನೀಡಿಕೆಗೆ ಅಡ್ಡಿ

Last Updated 5 ಮೇ 2022, 16:29 IST
ಅಕ್ಷರ ಗಾತ್ರ

ಮುಂಬೈ: ಆರ್‌ಬಿಐ ಬಡ್ಡಿ ದರ ಹೆಚ್ಚಳ ಮಾಡಿರುವುದರಿಂದ ಬ್ಯಾಂಕ್‌ಗಳ ಸಾಲ ನೀಡಿಕೆ ಸಾಮರ್ಥ್ಯದ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರಿಸರ್ಚ್‌ (ಇಕ್ರಾ) ಅಭಿಪ್ರಾಯಪಟ್ಟಿದೆ.

2022ರ ಏಪ್ರಿಲ್‌ 8ರವರೆಗಿನ ಬ್ಯಾಂಕ್‌ಗಳ ಸಾಲ ನೀಡಿಕೆಯು ಶೇ 11.2ರಷ್ಟು ಬೆಳವಣಿಗೆ ಕಾಣುವ ಮೂಲಕ ಚೇತರಿಕೆ ಕಾಣುವ ಸುಳಿವು ನೀಡಿದೆ.ಇಂತಹ ಸಂದರ್ಭದಲ್ಲಿ ಬಡ್ಡಿದರ ಹೆಚ್ಚಳ ಮಾಡುವ ಮೂಲಕ ಸಾಲವು ತುಟ್ಟಿಯಾಗುವಂತೆ ಮಾಡಲಾಗಿದೆ. ಇದರಿಂದಾಗಿ ಸಾಲ ನೀಡಿಕೆಗೆ ಹಿನ್ನಡೆಯಾಗಲಿದೆ ಎಂದು ಹೇಳಿದೆ.

2022ರ ಏಪ್ರಿಲ್‌ 8ರವರೆಗಿನ ಸಾಲ ನೀಡಿಕೆ ಬೆಳವಣಿಗೆಯು 2019ರ ಜುಲೈ ಬಳಿಕದ ಅತ್ಯಂತ ಗರಿಷ್ಠ ಮಟ್ಟದ್ದಾಗಿದೆ. 2021ರ ಅವಧಿಯಲ್ಲಿ ಸಾಲ ನೀಡಿಕೆಯು ಶೇ 5.3ರಷ್ಟು ಬೆಳವಣಿಗೆ ಕಂಡಿತ್ತು ಎಂದು ಅದು ತಿಳಿಸಿದೆ.

ಮಧ್ಯಮ ಅವಧಿಯಲ್ಲಿ, ಹಣದುಬ್ಬರದ ಒತ್ತಡ, ಪೂರೈಕೆ ವ್ಯವಸ್ಥೆಯಲ್ಲಿನ ಅಡ್ಡಿಗಳು ಹಾಗೂ ಗ್ರಾಹಕರಿಂದ ಬೇಡಿಕೆ ಕಡಿಮೆ ಇರುವುದು ಸಹ ಬ್ಯಾಂಕ್‌ಗಳ ಸಾಲ ನೀಡಿಕೆಯ ಮೇಲೆ ಪರಿಣಾಮ ಉಂಟುಮಾಡಲಿದೆ ಎಂದು ಇಕ್ರಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT