ಮುಂಬೈ : 2025–26ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ₹2.87 ಲಕ್ಷ ಕೋಟಿಯಷ್ಟು ದಾಖಲೆ ಮೊತ್ತದ ಲಾಭಾಂಶ ಪಾವತಿಸಲು ನಿರ್ಧರಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶುಕ್ರವಾರ ತಿಳಿಸಿದೆ.

2024–25ರ ಆರ್ಥಿಕ ವರ್ಷದಲ್ಲಿ ಆರ್ಬಿಐ ₹2.69 ಲಕ್ಷ ಕೋಟಿ ಲಾಭಾಂಶ ಪಾವತಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿಯ ಲಾಭಾಂಶದಲ್ಲಿ ಶೇ 6.7ರಷ್ಟು ಹೆಚ್ಚಳವಾಗಿದೆ. 2023–24ರಲ್ಲಿ ₹2.1 ಲಕ್ಷ ಕೋಟಿ ಮತ್ತು 2022–23ರಲ್ಲಿ ₹87,416 ಕೋಟಿ ಪಾವತಿಸಿತ್ತು.

ಪಶ್ಚಿಮ ಏಷ್ಯಾ ಸಂಘರ್ಷದಿಂದ ಹೆಚ್ಚುತ್ತಿರುವ ಆಮದು ಬಿಲ್ ಮತ್ತು ಪೂರೈಕೆ ಸರಪಳಿಯ ಅಡಚಣೆಯ ನಡುವೆ ಇದು ಸರ್ಕಾರದ ಬೊಕ್ಕಸಕ್ಕೆ ಉತ್ತೇಜನ ನೀಡಲಿದೆ.

ಆರ್ಬಿಐ ಗವರ್ನರ್ ಅಧ್ಯಕ್ಷತೆಯಲ್ಲಿ ನಡೆದ ಆರ್ಬಿಐನ ಕೇಂದ್ರೀಯ ಮಂಡಳಿಯ ನಿರ್ದೇಶಕರ 623ನೇ ಸಭೆಯು ಇದಕ್ಕೆ ಅನುಮೋದನೆ ನೀಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ನ ಬ್ಯಾಲೆನ್ಸ್ಶೀಟ್ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಶೇ 20ರಷ್ಟು ಏರಿಕೆಯಾಗಿದ್ದು, ₹91.97 ಲಕ್ಷ ಕೋಟಿಗೆ ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.