ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಸ್‌ಎಂಇ ಆರ್‌ಬಿಐ ಸಮಿತಿಗೆ ಸಿನ್ಹಾ ನೇತೃತ್ವ

Last Updated 3 ಜನವರಿ 2019, 19:16 IST
ಅಕ್ಷರ ಗಾತ್ರ

ಮುಂಬೈ: ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕಾ (ಎಂಎಸ್‌ಎಂಇ) ವಲಯದ ದೀರ್ಘಾವಧಿ ಸುಸ್ಥಿರತೆಗೆ ಪರಿಹಾರ ಸೂಚಿಸಲು ಪರಿಣತರ ಸಮಿತಿ ರಚಿಸಲಾಗಿದೆ.

ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಮಾಜಿ ಅಧ್ಯಕ್ಷ ಯು. ಕೆ. ಸಿನ್ಹಾ ನೇತೃತ್ವದಲ್ಲಿ ಈ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ‘ಎಂಎಸ್‌ಎಂಇ’ ವಲಯದ ₹ 25 ಕೋಟಿವರೆಗಿನ ಸಾಲವನ್ನು ಒಂದು ಬಾರಿ ಪುನರ್‌ ಹೊಂದಾಣಿಕೆ ಮಾಡಲು ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ, ಆರ್‌ಬಿಐ ಈ ಸಮಿತಿ ರಚಿಸಿದೆ.

ಎಂಟು ಮಂದಿ ಸದಸ್ಯರ ಈ ಸಮಿತಿಯು, ಈ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವ ಕಾರಣಗಳನ್ನೂ ಪರಿಶೀಲಿಸಲಿದೆ. ಈ ವರ್ಷದ ಜೂನ್‌ ಅಂತ್ಯದ ವೇಳೆಗೆ ವರದಿ ನೀಡಲು ಸಮಿತಿಗೆ ಗಡುವು ನೀಡಲಾಗಿದೆ.

ವಿಶ್ವದಾದ್ಯಂತ ಜಾರಿಯಲ್ಲಿ ಇರುವ ಅತ್ಯುತ್ತಮ ಕ್ರಮಗಳು, ಭಾರತದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆಗಳನ್ನೂ ಸಮಿತಿಯು ಪರಿಶೀಲಿಸಿ ಶಿಫಾರಸುಗಳನ್ನು ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT