ಸೋಮವಾರ, ಆಗಸ್ಟ್ 26, 2019
21 °C

ಮನೆ ಖರೀದಿದಾರರಿಗೆ ಭದ್ರತೆ ಎನ್‌ಸಿಎಲ್‌ಟಿ ಮೊರೆಗೆ ಅವಕಾಶ

Published:
Updated:

ನವದೆಹಲಿ: 2018ರ ಹಣಕಾಸು ನಷ್ಟ ಮತ್ತು ದಿವಾಳಿ ಕಾಯ್ದೆಗೆ ಮಾಡಲಾದ ತಿದ್ದುಪಡಿಯ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂಕೋರ್ಟ್‌ ಶುಕ್ರವಾರ ಎತ್ತಿಹಿಡಿದಿದೆ. ಇದರಿಂದ ಮನೆ ಖರೀದಿದಾರರಿಗೆ ‘ಹಣಕಾಸು ಸಾಲದಾತರು’ ಎಂಬ ಸ್ಥಾನಮಾನ ನೀಡಿದೆ.

ಲೋಪ ಎಸಗುವ ರಿಯಲ್‌ ಎಸ್ಟೇಟ್‌ ಕಂ‍ಪನಿ ವಿರುದ್ಧ  ರಾಷ್ಟ್ರೀಯ ಕಂಪನಿ ಕಾಯ್ದೆ ಪ್ರಾಧಿಕಾರದ (ಎನ್‌ಸಿಎಲ್‌ಟಿ) ಮೊರೆ ಹೋಗಬಹುದು ಎಂದೂ ಹೇಳಿದೆ.

ನ್ಯಾಯಮೂರ್ತಿ ಆರ್‌.ಎಫ್‌.ನಾರಿಮನ್‌ ಅವರನ್ನು ಒಳಗೊಂಡ ಮೂವರು ನ್ಯಾಯಮೂರ್ತಿಗಳ ಪೀಠವು ರಿಯಲ್‌ ಎಸ್ಟೇಟ್‌ ಕಂಪನಿಗಳು ಸಲ್ಲಿಸಿದ ಅರ್ಜಿಯನ್ನು ತಳ್ಳಿ ಹಾಕಿದೆ.

ಯಾವುದೇ ಡೆವಲಪರ್‌ಗಳು ಮನೆ ನೀಡುವಲ್ಲಿ ವಿಳಂಬ ಮಾಡಿದರೆ ಇಲ್ಲವೇ ಒಪ್ಪಂದವನ್ನು ಮುರಿದರೆ ಸೆಕ್ಸನ್‌7 ರ ಅನ್ವಯ ಕ್ರಮ ಕೈಗೊಳ್ಳಬಹುದಾದ ಅವಕಾಶವನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದವು. 

‘ಮನೆ ಖರೀದಿದಾರರು ರಿಯಲ್ ಎಸ್ಟೇಟ್‌ ಕಂಪನಿಗಳಿಗೆ ಹಣವನ್ನು ಮುಂಗಡವಾಗಿ ಪಾವತಿ ಮಾಡಿರುತ್ತಾರೆ. ಅವರು ಹಣಕಾಸು ಸಾಲದಾತರು’ ಎಂದು ‍ಪೀಠ ಹೇಳಿದೆ. 

ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ಸಾಕಷ್ಟು ಮನೆ ಖರೀದಿದಾರರಿಗೆ ಅನುಕೂಲವಾಗಲಿದೆ. ಹಣ ಕೊಟ್ಟರೂ ಮನೆಪಡೆಯಲಾಗದೆ ಪರದಾಡುತ್ತಿದ್ದ ಜನರು ಇದರಿಂದ ನಿಟ್ಟಿಸಿರುಬಿಡುವಂತಾಗಿದೆ.

Post Comments (+)