ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲ್‌ಮಾರ್ಕ್‌: ಪ್ರತಿಭಟನೆ ನಿರ್ಧಾರ ಮರುಪರಿಶೀಲನೆಗೆ ಸರ್ಕಾರ ಮನವಿ

Last Updated 21 ಆಗಸ್ಟ್ 2021, 20:00 IST
ಅಕ್ಷರ ಗಾತ್ರ

ನವದೆಹಲಿ: ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್‌ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಸೋಮವಾರ ನಡೆಸಲು ಉದ್ದೇಶಿಸಿರುವ ಸಾಂಕೇತಿಕ ಪ್ರತಿಭಟನೆಯ ನಿರ್ಧಾರದ ಕುರಿತು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರವು ಹರಳು ಮತ್ತು ಚಿನ್ನಾಭರಣ ಮಂಡಳಿಗೆ (ಜಿಜೆಸಿ) ಮನವಿ ಮಾಡಿದೆ.

ಮಂಡಳಿಯು ಪ್ರತಿಭಟನೆ ನಡೆಸುವ ನಿರ್ಧಾರವನ್ನು ಶುಕ್ರವಾರ ಪ್ರಕಟಿಸಿತ್ತು. ದೇಶದ ನಾಲ್ಕೂ ವಲಯಗಳ ಮುತ್ತು ಮತ್ತು ಆಭರಣ ಉದ್ಯಮದ 350ಕ್ಕೂ ಹೆಚ್ಚಿನ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ನೀಡಲಿವೆ ಎಂದು ಹೇಳಿತ್ತು.

ಹಾಲ್‌ಮಾರ್ಕ್‌ ಕಡ್ಡಾಯ ಎಂಬ ನಿಯಮವು ಜೂನ್‌ 16ರಿಂದ ಹಂತ ಹಂತವಾಗಿ ಜಾರಿಗೆ ಬಂದಿದೆ. ಮೊದಲ ಹಂತದಲ್ಲಿ ಕೇಂದ್ರ ಸರ್ಕಾರವು 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 256 ಜಿಲ್ಲೆಗಳಲ್ಲಿ ಇದನ್ನು ಜಾರಿಗೊಳಿಸಲಾಗಿದೆ.

‘ಕೆಲವು ಸಂಘಗಳು ಮುಷ್ಕರಕ್ಕೆ ಕರೆ ನೀಡಿವೆ ಎಂದು ಕೇಳಿದ್ದೇನೆ. ಉದ್ಯಮದ ಪ್ರತಿಯೊಂದು ಸಮಸ್ಯೆಗಳನ್ನೂ ಸರ್ಕಾರವು ಆಲಿಸುತ್ತಿದೆ. ಹೀಗಿರುವಾಗ ಯಾವುದಕ್ಕಾಗಿ ಮುಷ್ಕರ?’ ಎಂದುಭಾರತದ ಮಾನದಂಡ ಮಂಡಳಿಯ (ಬಿಐಎಸ್‌) ಪ್ರಧಾನ ನಿರ್ದೇಶಕ ಪ್ರಮೋದ್‌ ಕುಮಾರ್ ತಿವಾರಿ ಅವರು ವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

‘ಆಗಸ್ಟ್‌ 19ರಂದು ನಡೆದ ಸಭೆಯಲ್ಲಿ ಚಿನ್ನಾಭರಣಗಳ ಹಲವು ಸಂಘಗಳು ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿದ್ದವು. ಅಲ್ಲದೆ, ಸರ್ಕಾರದ ನಿರ್ಧಾರವನ್ನು ಬೆಂಬಲಿಸುವುದಾಗಿಯೂ ಹೇಳಿದ್ದರು’ ಎಂದು ತಿವಾರಿ ಅವರು ಶನಿವಾರ ತಿಳಿಸಿದ್ದಾರೆ.

‘ಕೆಲವು ಚಿನ್ನಾಭರಣ ವ್ಯಾಪಾರಿಗಳಿಗೆ ಸಮಸ್ಯೆಗಳಿದ್ದರೆ, ಅದಕ್ಕೆ ಯಾವುದೇ ಆಧಾರವಿಲ್ಲ. ದೇಶ ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ಅತಿದೊಡ್ಡ ಹೆಜ್ಜೆಯಾಗಿದೆ. ಚಿನ್ನಾಭರಣ ವರ್ತಕರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರವು ಯಾವಾಗಲೂ ಸಿದ್ಧವಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ದೊಡ್ಡ ಯಶಸ್ಸು:ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್‌ ಕಡ್ಡಾಯದ ಮೊದಲ ಹಂತವು ಜಾರಿಗೆ ಬಂದು 50 ದಿನಗಳು ಕಳೆದಿದ್ದು,ಅಭೂತಪೂರ್ವ ಯಶಸ್ಸನ್ನು ಕಂಡಿದೆ. 1 ಕೋಟಿಗೂ ಅಧಿಕ ಚಿನ್ನಾಭರಣಗಳನ್ನು ಹಾಲ್‌ಮಾರ್ಕ್ ಮಾಡಲಾಗಿದೆ. ಎಂದು ತಿವಾರಿ ಮಾಹಿತಿ ನೀಡಿದ್ಧಾರೆ.

ಹಾಲ್‌ಮಾರ್ಕ್‌ ಕಡ್ಡಾಯಗೊಳಿಸಿದ ಬಳಿಕ, ಹಾಲ್‌ಮಾರ್ಕ್‌ಗೆ ನೋಂದಣಿ ಮಾಡಿಕೊಳ್ಳುತ್ತಿರುವ ವ್ಯಾಪಾರಿಗಳ ಸಂಖ್ಯೆಯು 35 ಸಾವಿರದಿಂದ 91,603ಕ್ಕೆ ಏರಿಕೆ ಆಗಿದೆ ಎಂದು ಅವರು ತಿಳಿಸಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT