ಬ್ಯಾಡಗಿ (ಹಾವೇರಿ): ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) ಮಾರ್ಚ್ 16ರಂದು 2.43 ಲಕ್ಷ ಮೆಣಸಿನಕಾಯಿ ಚೀಲಗಳು (60,790 ಕ್ವಿಂಟಲ್) ಆವಕವಾಗಿದ್ದು, ಪ್ರಸಕ್ತ ಹಂಗಾಮಿನಲ್ಲಿ ಇದು ಮಾರುಕಟ್ಟೆಯ ದಾಖಲೆ ಆವಕವಾಗಿದೆ.

2025ರ ಅಕ್ಟೋಬರ್ ಬಳಿಕ ಸುರಿದ ಅಕಾಲಿಕ ಮಳೆ ಪರಿಣಾಮ ತೇವಾಂಶ ಹೆಚ್ಚಾಗಿ ಮೆಣಸಿನಕಾಯಿ ಫಸಲು ಕಡಿಮೆಯಾಗಿದೆ. ಎರಡು ವರ್ಷಗಳಿಂದ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಸಿಗದಿದ್ದರಿಂದ ಹಲವು ರೈತರು ಮೆಣಸಿನಕಾಯಿ ಬೆಳೆಯಿಂದ ವಿಮುಖರಾಗಿದ್ದರು.

ಮೆಣಸಿನಕಾಯಿ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಯುಗಾದಿ ಹಬ್ಬಕ್ಕೂ ಮುನ್ನ ಮಾರುಕಟ್ಟೆ ಪ್ರಸಕ್ತ ಹಂಗಾಮಿನಲ್ಲಿ ದಾಖಲೆಯ ಆವಕ ಕಂಡಿದೆ. ರಾಯಚೂರು, ಬಳ್ಳಾರಿ, ಬಾಗಲಕೋಟೆ, ಗೋಕಾಕ, ವಿಜಯಪುರ, ಶಹಪುರ ಮತ್ತಿತರ ಭಾಗದಲ್ಲಿ ಬೆಳೆದ ಮೆಣಸಿನಕಾಯಿಯನ್ನು ರೈತರು ಮಾರಾಟಕ್ಕೆ ತಂದಿದ್ದರು.

ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್ಗೆ ₹ 62 ಸಾವಿರ, ಕಡ್ಡಿ ಮೆಣಸಿನಕಾಯಿ ₹ 58 ಸಾವಿರ ಮತ್ತು ಗುಂಟೂರು ತಳಿ ₹ 17 ಸಾವಿರದಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿ ಸ್ಥಿರತೆ ಕಾಯ್ದುಕೊಂಡಿವೆ. ಸರಾಸರಿ ಬೆಲೆಯಲ್ಲೂ ಬ್ಯಾಡಗಿ ಕಡ್ಡಿ ₹ 47 ಸಾವಿರ, ಬ್ಯಾಡಗಿ ಡಬ್ಬಿ ₹ 49 ಸಾವಿರ ಮತ್ತು ಗುಂಟೂರ ತಳಿ ₹ 13 ಸಾವಿರ ದರಕ್ಕೆ ಮಾರಾಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.