ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಮೊದಲ ತಿಂಗಳಾದ ಏಪ್ರಿಲ್ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮೂಲಕ ₹2.43 ಲಕ್ಷ ಕೋಟಿ ದಾಖಲೆಯ ವರಮಾನ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.

ಕಳೆದ ಆರ್ಥಿಕ ವರ್ಷದ ಇದೇ ತಿಂಗಳಿನಲ್ಲಿ ₹2.23 ಲಕ್ಷ ಕೋಟಿ ಸಂಗ್ರಹವಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಸಂಗ್ರಹದಲ್ಲಿ ಶೇ 8.7ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಆಮದು ಮಾಡಿಕೊಂಡ ಸರಕುಗಳಿಂದ ಬಂದ ವರಮಾನದಲ್ಲಿ ಏರಿಕೆಯಾಗಿರುವುದು, ದೇಶದ ಮಾರುಕಟ್ಟೆಯಲ್ಲಿ ಮಾರಾಟ ಮತ್ತು ಖರೀದಿ ಹೆಚ್ಚಳ ಆಗಿರುವುದು ಜಿಎಸ್ಟಿ ಸಂಗ್ರಹ ಜಾಸ್ತಿ ಆಗಿರುವುದಕ್ಕೆ ಕಾರಣ ಎಂದು ತಿಳಿಸಿದೆ.

ದೇಶದ ಆಂತರಿಕ ವಹಿವಾಟುಗಳಿಂದ ಬರುವ ಜಿಎಸ್ಟಿ ವರಮಾನದಲ್ಲಿ ಶೇ 4.3ರಷ್ಟು ಏರಿಕೆಯಾಗಿದ್ದು, ₹1.85 ಲಕ್ಷ ಕೋಟಿ ಸಂಗ್ರಹವಾಗಿದೆ. ಆಮದು ಮಾಡಿಕೊಂಡ ಸರಕುಗಳಿಂದ ₹57,580 ಕೋಟಿ ಸಂಗ್ರಹವಾಗಿದ್ದು, ಶೇ 25.8ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಮರುಪಾವತಿಯು ಶೇ 19.3ರಷ್ಟು ಏರಿಕೆಯಾಗಿದ್ದು, ₹31,793 ಕೋಟಿಯಷ್ಟಾಗಿದೆ. ಮರುಪಾವತಿ ಬಳಿಕ ನಿವ್ವಳ ಜಿಎಸ್ಟಿ ಸಂಗ್ರಹ ಶೇ 7.3ರಷ್ಟು ಹೆಚ್ಚಳವಾಗಿದ್ದು, ₹2.11 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ.

‘ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಜಾರಿಯಾದ ಜಿಎಸ್ಟಿ 2.0 ಬಳಿಕ, ಆರಂಭದಲ್ಲಿ ಸಂಗ್ರಹವು ಇಳಿಕೆಯಾಗಿತ್ತು. ಬಳಿಕ ಏರಿಕೆ ಕಾಣುತ್ತಿದ್ದು, ಸಂಗ್ರಹದ ಮಾಸಿಕ ಬೆಳವಣಿಗೆಯು ಶೇ 7ರಿಂದ ಶೇ 8ರಷ್ಟಿದೆ’ ಎಂದು ಪ್ರೈಸ್ ವಾಟರ್ಹೌಸ್ ಆ್ಯಂಡ್ ಎಲ್ಎಲ್ಪಿ ಪಾಲುದಾರ ಪ್ರತೀಕ್ ಜೈನ್ ಹೇಳಿದ್ದಾರೆ.

‘ಆಮದು ಮಾಡಿಕೊಂಡ ಸರಕುಗಳಿಂದ ಬಂದ ವರಮಾನ ಹೆಚ್ಚಳವಾಗಿದೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಇದ್ದರೂ ದೇಶದ ವ್ಯಾಪಾರ ವಹಿವಾಟು ಉತ್ತಮವಾಗಿದೆ. ಇದು ವರಮಾನ ಹೆಚ್ಚಲು ಕಾರಣ’ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ಮಹೇಶ್ ಜೈಸಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.