ಶಿಯೊಮಿ: ಹೊಸ ಫೋನ್‌ ಬಿಡುಗಡೆ

7

ಶಿಯೊಮಿ: ಹೊಸ ಫೋನ್‌ ಬಿಡುಗಡೆ

Published:
Updated:

ಬೆಂಗಳೂರು: ಚೀನಾದ ಮೊಬೈಲ್ ತಯಾರಿಕಾ ಕಂಪನಿ ಶಿಯೊಮಿ, ರೆಡ್ ಮಿ 6, ರೆಡ್‌ ಮಿ 6ಎ ಮತ್ತು ರೆಡ್‌ ಮಿ 6 ಪ್ರೊ ಹೆಸರಿನ ಹೊಸ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

₹5,999ರಿಂದ ₹ 12,999ರವರೆಗೆ ಇವುಗಳ ಬೆಲೆ ನಿಗದಿಪಡಿಸಲಾಗಿದೆ. ಎಲ್ಲ ಫೋನ್‌ಗಳನ್ನು ಭಾರತದಲ್ಲಿಯೇ ತಯಾರಿಸಲಾಗಿದ್ದು, ಕಪ್ಪು, ಗುಲಾಬಿ, ನೀಲಿ, ಕೆಂಪು ಮತ್ತು ಚಿನ್ನದ ಬಣ್ಣಗಳಲ್ಲಿ ಲಭ್ಯ ಇವೆ. 

ರೆಡ್‌ ಮಿ 6 ಪ್ರೊ ಎಐ ತಂತ್ರಜ್ಞಾನ ಒಳಗೊಂಡಿರುವ ಎರಡು ಕ್ಯಾಮೆರಾಗಳನ್ನು ಒಳಗೊಂಡಿದ್ದು ಒಮ್ಮೆ ಚಾರ್ಜ್ ಮಾಡಿದರೆ ಎರಡು ದಿನ ಬಳಸಬಹುದು. ಇನ್ನು ರೆಡ್ ಮಿ 6 ಮತ್ತು ರೆಡ್‌ ಮಿ 6ಎ ಫೋನ್‌ಗಳಲ್ಲಿ ಪಿ22 ಮತ್ತು ಹೆಲಿಯೊ ಎ22 ಗುಣಮಟ್ಟದ ಚಿಪ್‌ಸೆಟ್‌ ಮತ್ತು 12ಎನ್‌ಎಂ ಪ್ರೊಸೆಸರ್ ಅಳವಡಿಸಲಾಗಿದೆ. 

ಮೊಬೈಲ್‌ಫೋನ್‌ಗಳನ್ನು ಪರಿಚಯಿಸಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಮನು ಜೈನ್, ‘ನಮ್ಮ ಗ್ರಾಹಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಮೊಬೈಲ್‌ ಒದಗಿಸುವುದು ನಮ್ಮ ಉದ್ದೇಶವಾಗಿದೆ. ಈಗ ಪರಿಚಯಿಸಿರುವ ರೆಡ್‌ ಮಿ 6ಎ ಮತ್ತು ರೆಡ್‌ಮಿ 6ಗಳಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಸಲಾಗಿದೆ. ಇವು ಗ್ರಾಹಕರ ನೆಚ್ಚಿನ ಫೋನ್‌ಗಳಾಗಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೆಡ್‌ ಮಿ 6 ಪ್ರೊ ಅಮೆಜಾನ್ ಮತ್ತು ಎಂಐ.ಕಾಂನಲ್ಲಿ ಇದೇ 11ರಿಂದ ದೊರೆಯಲಿವೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !