ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್ ತೆಕ್ಕೆಗೆ ಹ್ಯಾಮ್ಲೀಸ್

Last Updated 10 ಮೇ 2019, 18:29 IST
ಅಕ್ಷರ ಗಾತ್ರ

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾದ ರಿಲಯನ್ಸ್ ಬ್ರ್ಯಾಂಡ್ಸ್ ಲಿಮಿಟೆಡ್, ಹಾಂಕಾಂಗ್‌ನ ಸಿಬ್ಯಾನರ್ ಇಂಟರ್‌ನ್ಯಾಷನಲ್‌ ಹೋಲ್ಡಿಂಗ್ಸ್ ಒಡೆತನದ ಹ್ಯಾಮ್ಲೀಸ್ ಗ್ಲೋಬಲ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ಶೇ 100ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಂಡಿದೆ.

1760ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಹ್ಯಾಮ್ಲೀಸ್, ಪ್ರಪಂಚದಲ್ಲೇ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಆಟಿಕೆ ತಯಾರಿಕೆ ಮತ್ತು ಮಾರಾಟ ಸಂಸ್ಥೆಯಾಗಿದೆ.

ವೈವಿಧ್ಯಮಯ ಆಟಿಕೆಗಳ ಮೂಲಕ ಪ್ರಪಂಚದಾದ್ಯಂತ ಮಕ್ಕಳ ಮನ ಗೆದ್ದಿದೆ. ನಾಟಕ, ಮನರಂಜನೆಯ ವ್ಯಾಪಕ ಶ್ರೇಣಿಯ ಗೊಂಬೆಗಳ ಅನನ್ಯ ಮಾದರಿಯನ್ನೂ ಹ್ಯಾಮ್ಲೀಸ್‌ನಲ್ಲಿ ಕಾಣಬಹುದಾಗಿದೆ. ಈ ಸ್ವಾಧೀನತೆಯು ಆಟಿಕೆ ಚಿಲ್ಲರೆ ಉದ್ಯಮದಲ್ಲಿ ರಿಲಯನ್ಸ್ ಬ್ರ್ಯಾಂಡ್‌ಗೆ ಹೊಸ ಮಾನ್ಯತೆ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT