ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹20,000 ಕೋಟಿ ದಾಟಿದ ರಿಲಯನ್ಸ್‌ ಕ್ಯಾಪಿಟಲ್ಸ್‌ ಸಾಲ

Last Updated 8 ಜನವರಿ 2021, 18:41 IST
ಅಕ್ಷರ ಗಾತ್ರ

ನವದೆಹಲಿ: ಅನಿಲ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಸಮೂಹದ ಭಾಗವಾಗಿರುವ ರಿಲಯನ್ಸ್‌ ಕ್ಯಾಪಿಟಲ್‌ ಲಿಮಿಟೆಡ್ (ಆರ್‌ಸಿಎಲ್‌) ಸಂಸ್ಥೆಯ ಸಾಲದ ಮೊತ್ತವು 2020ರ ಡಿಸೆಂಬರ್‌ ಅಂತ್ಯಕ್ಕೆ ₹ 20,379.71 ಕೋಟಿಯಷ್ಟಾಗಿದೆ ಎಂದು ಸಂಸ್ಥೆಯು ತಿಳಿಸಿದೆ.

2020ರ ಆಗಸ್ಟ್‌ 31ರ ವೇಳೆಗೆ ಬಡ್ಡಿ ಸೇರಿದಂತೆ ಒಟ್ಟು ಸಾಲದ ಪ್ರಮಾಣವು ₹ 19,805.7 ಕೋಟಿಯಷ್ಟಿತ್ತು.

ಎಚ್‌ಡಿಎಫ್‌ಸಿ ಬ್ಯಾಂಕ್‌ ಹಾಗೂ ಎಕ್ಸಿಸ್‌ ಬ್ಯಾಂಕ್‌ಗೆ ನೀಡಬೇಕಾದ ಮೊತ್ತವು ಕ್ರಮವಾಗಿ ₹523.98 ಕೋಟಿ ಹಾಗೂ ₹ 100.63 ಕೋಟಿಯಷ್ಟಿದೆ. ಬ್ಯಾಂಕ್‌ಗಳು ಹಾಗೂ ವಿವಿಧ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ಮತ್ತು ಅದರ ಬಡ್ಡಿ ಸೇರಿ ₹700.76 ಕೋಟಿಯಷ್ಟಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಇದೇ ಸಮೂಹದ, ರಿಲಯನ್ಸ್‌ ಹೋಮ್ ಫೈನಾನ್ಸ್‌ ಸಂಸ್ಥೆಯ ಸಾಲವು ₹ 12,943.18 ಕೋಟಿ ಇದೆ. ಇದರಲ್ಲಿ ಮೂಲ ಸಾಲ ಹಾಗೂ ಬಡ್ಡಿಯೂ ಸೇರಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT