ಗುರುವಾರ , ಜೂಲೈ 9, 2020
29 °C

ರಿಲಯನ್ಸ್‌ನಿಂದ ಹಕ್ಕಿನ ಷೇರುಲಾಭಾಂಶ ಘೋಷಣೆ ನಿರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಆರ್‌ಐಎಲ್‌) ಕಂಪನಿಯು ಮೂರು ದಶಕಗಳ ಬಳಿಕ ಇದೇ ಮೊದಲ ಬಾರಿಗೆ  ಗುರುವಾರ ಹಕ್ಕಿನ ಷೇರು ವಿತರಣೆ ಮಾಡುವ ಕುರಿತು ಪರಿಗಣಿಸುವ ನಿರೀಕ್ಷೆ ಇದೆ. ಸಾಲವನ್ನು ತಗ್ಗಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಈ ನಿರ್ಧಾರಕ್ಕೆ ಮುಂದಾಗಿದೆ.

ಕಂಪನಿಯ ಆಡಳಿತ ಮಂಡಳಿ ಗುರುವಾರ ಸಭೆ ಸೇರಲಿದ್ದು, ಮಾರ್ಚ್‌ 31ರ ಅಂತ್ಯದ  ಆರ್ಥಿಕ ಫಲಿತಾಂಶಕ್ಕೆ ಒಪ್ಪಿಗೆ ನೀಡಲಿದೆ. ಲಾಭಾಂಶ ನೀಡುವ ಬಗ್ಗೆಯೂ ಶಿಫಾರಸು ಮಾಡಲಿದೆ. ಈ ಕುರಿತು ಷೇರುಪೇಟೆಗೆ ಮಾಹಿತಿ ನೀಡಿದೆ.

2021ರ ವೇಳೆಗೆ ಸಾಲವನ್ನು ಶೂನ್ಯಕ್ಕೆ ಇಳಿಸುವ ಯೋಜನೆಯನ್ನು2019ರ ಆಗಸ್ಟ್‌ನಲ್ಲಿಯೇ ಮುಕೇಶ್‌ ಅಂಬಾನಿ ತಿಳಿಸಿದ್ದರು. ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಹಕ್ಕಿನ ಷೇರು ವಿತರಣೆ ಮೂಲಕ ಸದ್ಯದ ವಹಿವಾಟು ದರದಲ್ಲಿ ₹ 40 ಸಾವಿರ ಕೋಟಿ ಸಂಗ್ರಹವಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು