ಭಾನುವಾರ, ಜೂನ್ 26, 2022
21 °C

ಕೋವಿಡ್: ನೌಕರರ ನೆರವಿಗೆ ರಿಲಯನ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್–19 ಸಾಂಕ್ರಾಮಿಕಕ್ಕೆ ತನ್ನ ಉದ್ಯೋಗಿಗಳು ಬಲಿಯಾದಲ್ಲಿ, ಅವರ ಕೊನೆಯ ಸಂಬಳದ ಮೊತ್ತವನ್ನು ಅವರ ಕುಟುಂಬಕ್ಕೆ ಐದು ವರ್ಷಗಳವರೆಗೆ ನೀಡಲು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತೀರ್ಮಾನಿಸಿದೆ. ಅಲ್ಲದೆ, ಮೃತ ಉದ್ಯೋಗಿಯ ಮಕ್ಕಳ ಪದವಿವರೆಗಿನ ಶಿಕ್ಷಣದ ವೆಚ್ಚಗಳಿಗೆ ನೆರವು ನೀಡುವುದಾಗಿಯೂ ಹೇಳಿದೆ.

ಮೃತ ಉದ್ಯೋಗಿಗಳ ಮಕ್ಕಳ ಪದವಿವರೆಗಿನ ಬೋಧನಾ ಶುಲ್ಕ, ಪುಸ್ತಕ ಮತ್ತು ವಸತಿನಿಲಯದ ವೆಚ್ಚಗಳನ್ನು ರಿಲಯನ್ಸ್ ಭರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು