ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌ ಲಾಭ ₹ 13 ಸಾವಿರ ಕೋಟಿ

Last Updated 30 ಜುಲೈ 2020, 21:32 IST
ಅಕ್ಷರ ಗಾತ್ರ

ನವದೆಹಲಿ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ ಕಂಪನಿಯು ಜೂನ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಲಾಭ ಗಳಿಸಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ ₹ 13,248 ಕೋಟಿ.

ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯ ಲಾಭ ₹ 10,141 ಕೋಟಿ ಆಗಿತ್ತು. ಹಿಂದಿನ ವರ್ಷದ ತ್ರೈಮಾಸಿಕಕ್ಕೆ ಹೋಲಿಸಿದರೆ, ಲಾಭದಲ್ಲಿ ಶೇಕಡ 30.6ರಷ್ಟು ಹೆಚ್ಚಳ ಆದಂತಾಗಿದೆ. ತೈಲದ ಚಿಲ್ಲರೆ ಮಾರಾಟ ವಿಭಾಗದಲ್ಲಿನ ಶೇಕಡ 49ರಷ್ಟು ಷೇರುಗಳ ಮಾರಾಟದಿಂದ ಈ ತ್ರೈಮಾಸಿಕದಲ್ಲಿ ₹ 4,966 ಕೋಟಿ ಆದಾಯ ಬಂದಿದೆ.

ರಿಲಯನ್ಸ್ ಜಿಯೊ ಈ ತ್ರೈಮಾಸಿಕದ ಲಾಭದಲ್ಲಿ ಶೇಕಡ 183ರಷ್ಟು ಏರಿಕೆ ದಾಖಲಿಸಿದೆ. ಕಂಪನಿಯ ನಿವ್ವಳ ಲಾಭ ₹ 2,520 ಕೋಟಿ. ಕಳೆದ ವರ್ಷದ ಈ ತ್ರೈಮಾಸಿಕದಲ್ಲಿ ಜಿಯೊ, ₹ 891 ಕೋಟಿ ನಿವ್ವಳ ಲಾಭ ಕಂಡಿತ್ತು.

ಎರಡು ಕೋಟಿ ಗ್ರಾಹಕರು

ಬೆಂಗಳೂರು: ರಿಲಯನ್ಸ್‌ನ ಅಂಗಸಂಸ್ಥೆ ಜಿಯೊ ಕರ್ನಾಟಕದಲ್ಲಿ ಈಗ ಎರಡು ಕೋಟಿಗೂ ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ‘ಕೇವಲ ಮೂರು ವರ್ಷಗಳಲ್ಲಿ ಇದು ಸಾಧ್ಯವಾಗಿದೆ’ ಎಂದು ಕಂಪನಿ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT