ಶನಿವಾರ, ಅಕ್ಟೋಬರ್ 1, 2022
20 °C

ರಿಲಯನ್ಸ್‌ ಜುವೆಲ್ಸ್‌ನಿಂದ ವರಲಕ್ಷ್ಮಿ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಿಲಯನ್ಸ್‌ ಜುವೆಲ್ಸ್‌ ಕಂಪನಿಯು ‘ವರಲಕ್ಷ್ಮಿ ಕಲೆಕ್ಷನ್ಸ್‌’ ಹೆಸರಿನ ವಿಶೇಷ ಆಭರಣಗಳ ಸಂಗ್ರಹವನ್ನು ಬಿಡುಗಡೆ ಮಾಡಿದೆ.

ದಕ್ಷಿಣ ಭಾರತದ ಸಮೃದ್ಧ ಸಂಪ್ರದಾಯ ಮತ್ತು ಪರಂಪರೆಯನ್ನು ಮೈಗೂಡಿಸಿಕೊಂಡಿರುವ ಈ ಆಭರಣವು ಪ್ರಾದೇಶಿಕತೆ, ಸಾಂಸ್ಕೃತಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಂಡಿದೆ.

ಸೂಕ್ಷ್ಮವಾಗಿ ಕೆತ್ತನೆ ಮಾಡಿದ ಸಾಂಪ್ರದಾಯಿಕ ನೆಕ್‌ಲೆಸ್‌, ಕಿವಿಯೋಲೆ, ಬಳೆ ಮತ್ತು ರಿಂಗ್‌ಗಳು ಲಭ್ಯವಿವೆ. 22 ಕ್ಯಾರಟ್‌ ಹಳದಿ ಚಿನ್ನದಲ್ಲಿ ವಿನ್ಯಾಸ ಮಾಡಲಾಗಿದೆ. ಪುರಾತನ ಚಿನ್ನದ ದೇಗುಲ ವಿನ್ಯಾಸಗಳು ಮತ್ತು ವರ್ಣಮಯ ಹವಳಗಳನ್ನು ಒಳಗೊಂಡಿದೆ. ಪ್ರತಿ ಚಿನ್ನದ ಆಭರಣದ ವಿನ್ಯಾಸವೂ ವಿಭಿನ್ನವಾಗಿದೆ ಎಂದು ಕಂಪನಿ ಹೇಳಿದೆ.

ವರಲಕ್ಷ್ಮಿ ಕಲೆಕ್ಷನ್‌ 2022ರ ವಿಶಿಷ್ಟ ವಿನ್ಯಾಸಗಳ ಜೊತೆಗೆ, ಚಿನ್ನದ ಆಭರಣ ಮೇಕಿಂಗ್‌ ಮತ್ತು ವಜ್ರದ ಆಭರಣದ ಮೌಲ್ಯದ ಮೇಲೆ ಈ ತಿಂಗಳ ಅಂತ್ಯದವರೆಗೆ ಗ್ರಾಹಕರಿಗೆ ಶೇಕಡ 25ವರೆಗೆ ವಿಶೇಷ ರಿಯಾಯಿತಿ ಸಿಗಲಿದೆ ಎಂದು ರಿಲಯನ್ಸ್‌ ಜ್ಯುವೆಲ್ಸ್‌ನ ಸಿಇಒ ಸುನೀಲ್‌ ನಾಯಕ್ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು