ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಲ್ ಇನ್ ಒನ್’ ಪ್ಲ್ಯಾನ್‌’ ವಿವರ ಪ್ರಕಟಿಸಿದ ರಿಲಯನ್ಸ್‌ ಜಿಯೊ

Last Updated 4 ಡಿಸೆಂಬರ್ 2019, 18:30 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅತ್ಯಂತ ಸಿರಿವಂತ ಉದ್ಯಮಿ ಮುಕೇಶ್‌ ಅಂಬಾನಿ ಒಡೆತನದ ಮೊಬೈಲ್‌ ಸೇವಾ ಸಂಸ್ಥೆ ರಿಲಯನ್ಸ್‌ ಜಿಯೊ, ತನ್ನ ಹೊಸ ‘ಆಲ್ ಇನ್ ಒನ್ ಪ್ಲ್ಯಾನ್‌’ ವಿವರಗಳನ್ನು ಪ್ರಕಟಿಸಿದೆ.

ಈ ಪ್ಲ್ಯಾನ್‌ಗಳು ಇದೇ 6 ರಿಂದ (ಶುಕ್ರವಾರ) ಜಾರಿಗೆ ಬರಲಿವೆ. ಈ ಯೋಜನೆಯಡಿ ಮೊಬೈಲ್‌ ಕರೆ ಮತ್ತು ಡೇಟಾ ಶುಲ್ಕಗಳು ಶೇ 39ರವರೆಗೆ ಏರಿಕೆಯಾಗಿವೆ. ಪ್ರತಿ ದಿನ ಕನಿಷ್ಠ 1.5 ಜಿಬಿ ಡೇಟಾ ದೊರೆಯಲಿದೆ. ಪ್ರತಿಸ್ಪರ್ಧಿ ಸಂಸ್ಥೆಗಳ ದರಗಳಿಗೆ ಹೋಲಿಸಿದರೆ ಶೇ 15 ರಿಂದ ಶೇ 25ರಷ್ಟು ಅಗ್ಗವಾಗಿರಲಿವೆ.

ವೊಡಾಫೋನ್‌ ಐಡಿಯಾ ಮತ್ತು ಏರ್‌ಟೆಲ್‌ ಕಂಪನಿಗಳು ದರ ಹೆಚ್ಚಿಸಿದ ಬೆನ್ನಲ್ಲೇ, ‘ಆಲ್‌ ಇನ್‌ ಒನ್‌’ ಪ್ಲ್ಯಾನ್‌ ಜಾರಿಗೆ ಬರುತ್ತಿದೆ. ಈ ಯೋಜನೆಗಳು ತನ್ನ ಗ್ರಾಹಕರಿಗೆ ಶೇ 300ರಷ್ಟು ಹೆಚ್ಚಿನ ಪ್ರಯೋಜನಗಳನ್ನು ನೀಡಲಿವೆ ಎಂದು ಜಿಯೊ ತಿಳಿಸಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸೇವೆ ಒದಗಿಸುವುದಾಗಿಯೂ ಭರವಸೆ ನೀಡಿದೆ.

ಈಗಾಗಲೇ ಅಸ್ತಿತ್ವದಲ್ಲಿರುವ ಎಲ್ಲಾ ಗ್ರಾಹಕರು ಈ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT