ಶನಿವಾರ, ಆಗಸ್ಟ್ 15, 2020
27 °C

ಜಿಯೊ ಪ್ಲಾಟ್‌ಫಾರ್ಮ್ಸ್‌ನ 6.13% ಷೇರು 4 ಕಂಪನಿಗಳಿಗೆ ಮಾರಾಟ: ಒಪ್ಪಂದ ಪೂರ್ಣ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜಿಯೊ ಪ್ಲಾಟ್‌ಫಾರ್ಮ್ಸ್‌ನ ಶೇ 6.13ರಷ್ಟು ಷೇರುಗಳನ್ನು ನಾಲ್ಕು ಕಂಪನಿಗಳಿಗೆ ಮಾರಾಟ ಮಾಡುವ ಒಪ್ಪಂದವು ಪೂರ್ಣಗೊಂಡಿದೆ ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಶನಿವಾರ ತಿಳಿಸಿದೆ.

ಫೇಸ್‌ಬುಕ್‌ ಜತೆಗಿನ ಒಪ್ಪಂದ ಪೂರ್ಣಗೊಂಡ ಬಳಿಕ, ಎಲ್‌. ಕಾಟರ್‌ಟನ್‌, ದಿ ಪಬ್ಲಿಕ್‌ ಇನ್‌ವೆಸ್ಟ್‌ಮೆಂಟ್‌ ಫಂಡ್, ಸಿಲ್ವರ್‌ ಲೇಕ್‌ ಮತ್ತು ಜನರಲ್‌ ಅಟ್ಲಾಂಟಿಕ್ ಕಂಪನಿಗಳಿಂದ ಒಟ್ಟಾರೆ ₹ 30,062 ಕೋಟಿ ಬಂಡವಾಳ ಪಡೆದುಕೊಂಡಿರುವುದಾಗಿ ಹೇಳಿದೆ. ಫೇಸ್‌ಬುಕ್‌ನಿಂದ ಈಗಾಗಲೇ ₹ 43,574 ಕೋಟಿ ಹೂಡಿಕೆಯನ್ನು ಕಂಪನಿ ಪಡೆದುಕೊಂಡಿದೆ.

ರಿಲಯನ್ಸ್‌ ಕಂಪನಿಯು ಜಿಯೊ ಪ್ಲಾಟ್‌ಫಾರ್ಮ್ಸ್‌ನ ಶೇ 25.09 ಷೇರುಗಳನ್ನು 11 ಹೂಡಿಕೆದಾರರಿಗೆ ₹1,17,588.45 ಕೋಟಿಗೆ ಮಾರಾಟ ಮಾಡುವ ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ ಇದುವರೆಗೆ ಒಟ್ಟಾರೆ 5 ಹೂಡಿಕೆ ಒಪ್ಪಂದಗಳು ಪೂರ್ಣಗೊಂಡಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು