ಮುಂಬೈ: ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯು ₹18,645 ಕೋಟಿ ಲಾಭ ಗಳಿಸಿದೆ.

ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹18,540 ಕೋಟಿ ಲಾಭ ಗಳಿಸಿತ್ತು. ಜಿಎಸ್ಟಿ ದರ ಸರಳೀಕರಣದಿಂದ ಕಂಪನಿಯ ರಿಟೇಲ್ ವಹಿವಾಟು ಮಂದಗೊಂಡಿದೆ. ಹೀಗಾಗಿ, ಲಾಭದ ಪ್ರಮಾಣ ಕಡಿಮೆ ಆಗಿದೆ ಎಂದು ಕಂಪನಿ ಶುಕ್ರವಾರ ತಿಳಿಸಿದೆ.

ಕಂಪನಿಯ ವರಮಾನವು ₹2.69 ಲಕ್ಷ ಕೋಟಿಗೆ ಏರಿಕೆಯಾಗಿದ್ದು, 2024ರ ಡಿಸೆಂಬರ್ನಲ್ಲಿ ₹2.43 ಲಕ್ಷ ಕೋಟಿಯಷ್ಟಿತ್ತು.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಒಡೆತನದಲ್ಲಿರುವ ಜಿಯೊ ಪ್ಲ್ಯಾಟ್ಫಾರ್ಮ್ಸ್ ಕಂಪನಿಯ ಲಾಭವು ಶೇ 11.3ರಷ್ಟು ಹೆಚ್ಚಾಗಿದ್ದು, ₹7,629 ಕೋಟಿ ಲಾಭ ಗಳಿಸಿದೆ.

ಚಂದಾದಾರರ ಸಂಖ್ಯೆಯಲ್ಲಿನ ಹೆಚ್ಚಳ, ಪ್ರತಿ ಗ್ರಾಹಕರಿಂದ ಬರುವ ವರಮಾನದಲ್ಲಿನ (ಎಆರ್ಪಿಯು) ಏರಿಕೆ ಮತ್ತು ಡಿಜಿಟಲ್ ಸೇವೆಗಳಿಂದ ಲಾಭವು ಹೆಚ್ಚಳವಾಗಿದೆ.

ಪ್ರತಿ ಗ್ರಾಹಕರಿಂದ ಬರುವ ವರಮಾನ ₹213.7ಕ್ಕೆ ಏರಿಕೆ ಆಗಿದೆ. ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹203.3 ಆಗಿತ್ತು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.