ನವದೆಹಲಿ: ರಿಲಯನ್ಸ್ ರಿಟೇಲ್ ಕಂಪನಿಯು 2022-23ನೇ ಹಣಕಾಸು ವರ್ಷದಲ್ಲಿ 100 ಕೋಟಿ ವಹಿವಾಟಿನ ಮೈಲಿಗಲ್ಲನ್ನು ದಾಟಿದೆ. ಗ್ರಾಹಕರ ಸಂಖ್ಯೆಯು 24.9 ಕೋಟಿ ತಲುಪಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್‌ನ ಈಚಿನ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.
ವರ್ಷದಿಂದ ವರ್ಷಕ್ಕೆ ವಹಿವಾಟಿನಲ್ಲಿ ಶೇ 42ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ತಿಳಿಸಿದೆ. 2022–23ನೇ ಹಣಕಾಸು ವರ್ಷದಲ್ಲಿ ರಿಲಯನ್ಸ್ ಡಿಜಿಟಲ್ ಕಾಮರ್ಸ್ ಮತ್ತು ಹೊಸ ವಹಿವಾಟುಗಳು ಒಟ್ಟು ವರಮಾನಕ್ಕೆ ಶೇ 18ರಷ್ಟು ಕೊಡುಗಡೆ ನೀಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.