ಶುಕ್ರವಾರ, ಅಕ್ಟೋಬರ್ 22, 2021
21 °C

7–ಇಲೆವೆನ್ ಮಳಿಗೆ ಆರಂಭಿಸಲಿರುವ ರಿಲಯನ್ಸ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯು ದೇಶದಲ್ಲಿ 7–ಇಲೆವೆನ್ ಮಳಿಗೆಗಳನ್ನು ಆರಂಭಿಸಲಿದೆ. ಫ್ಯೂಚರ್ ಸಮೂಹವು 7–ಇಲೆವೆನ್ ಜೊತೆ ಒಪ್ಪಂದ ಮುರಿದುಕೊಂಡ ಬೆನ್ನಲ್ಲೇ ರಿಲಯನ್ಸ್ ಈ ವಿಚಾರ ತಿಳಿಸಿದೆ.

7–ಇಲೆವೆನ್‌ನ ಮೊದಲ ಮಳಿಗೆಯು ಮುಂಬೈನಲ್ಲಿ ಶನಿವಾರ ಆರಂಭವಾಗಲಿದೆ. ಇದಾದ ನಂತರದಲ್ಲಿ ತ್ವರಿತವಾಗಿ ಬೇರೆ ಬೇರೆ ಕಡೆಗಳಲ್ಲಿಯೂ ಇದು ಆರಂಭ ಆಗಲಿದೆ ಎಂದು ರಿಲಯನ್ಸ್ ರಿಟೇಲ್ ಪ್ರಕಟಣೆ ತಿಳಿಸಿದೆ. ಫ್ಯೂಚರ್ ರಿಟೇಲ್ ಮತ್ತು 7–ಇಲೆವೆನ್ ಕಂಪನಿಗಳು 2019ರ ಫೆಬ್ರುವರಿಯಲ್ಲಿ ಒಪ್ಪಂದ ಮಾಡಿಕೊಂಡಿದ್ದವು. ಆದರೆ ಮಳಿಗೆಯನ್ನು ತೆರೆಯಲು ಅಥವಾ ಫ್ರ್ಯಾಂಚೈಸ್ ಶು‌ಲ್ಕ ಪಾವತಿಸಲು ಫ್ಯೂಚರ್‌ಗೆ ಆಗದಿದ್ದ ಕಾರಣದಿಂದಾಗಿ ಒಪ್ಪಂದ ರದ್ದು ಮಾಡಲಾಯಿತು.

‘ಭಾರತದ ಮಾರುಕಟ್ಟೆ ಪ್ರವೇಶಿಸಲು ಇದು ನಮಗೆ ಸೂಕ್ತ ಸಮಯ’ ಎಂದು 7–ಇಲೆವೆನ್ ಕಂಪನಿಯ ಅಧ್ಯಕ್ಷ ಜೋ ಡೆಪಿಂಟೊ ಹೇಳಿದ್ದಾರೆ. 7–ಇಲೆವೆನ್ ಕಂಪನಿಯು ಅಮೆರಿಕದ ಟೆಕ್ಸಾಸ್ ಮೂಲದ್ದು. ಇದು ಫ್ರ್ಯಾಂಚೈಸ್‌ಗಳ ಮೂಲಕ ಹಾಗೂ ನೇರವಾಗಿ ಒಟ್ಟು 77 ಸಾವಿರಕ್ಕಿಂತ ಹೆಚ್ಚಿನ ಮಳಿಗೆಗಳನ್ನು ಜಗತ್ತಿನ 18 ದೇಶಗಳಲ್ಲಿ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು