ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದ ಒಳಹರಿವು: ಮುಂಚೂಣಿಯಲ್ಲಿ ಭಾರತ

Last Updated 8 ಡಿಸೆಂಬರ್ 2018, 16:26 IST
ಅಕ್ಷರ ಗಾತ್ರ

ವಾಷಿಂಗ್ಟನ್‌:ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ತಾಯ್ನಾಡಿಗೆ ರವಾನಿಸುವ ಹಣದ ಪ್ರಯೋಜನ ಪಡೆಯುವಲ್ಲಿ ಭಾರತ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ವಿಶ್ವ ಬ್ಯಾಂಕ್‌ ಹೇಳಿದೆ.

ವಲಸೆ ಮತ್ತು ಅಭಿವೃದ್ಧಿ ಕುರಿತ ವರದಿಯಲ್ಲಿ ವಿಶ್ವ ಬ್ಯಾಂಕ್‌ ಈ ಮಾಹಿತಿ ನೀಡಿದೆ.

2018ರಲ್ಲಿ ವಿವಿಧ ದೇಶಗಳಿಂದಭಾರತಕ್ಕೆ ಬಂದಿರುವ ಹಣದ ಒಟ್ಟು ಮೌಲ್ಯ ₹ 8.66 ಲಕ್ಷ ಕೋಟಿ ಇದೆ.

ಮೂರು ವರ್ಷಗಳಿಂದಲೂ ಭಾರತಕ್ಕೆ ಬರುತ್ತಿರುವ ಹಣದಲ್ಲಿ ಏರಿಕೆ ಕಂಡುಬರುತ್ತಿದೆ. 2016ರಲ್ಲಿ ₹ 4.45 ಲಕ್ಷ ಕೋಟಿ ಇತ್ತು. 2017ರಲ್ಲಿ ₹ 4.63 ಲಕ್ಷ ಕೋಟಿಗೆ ತಲುಪಿತ್ತು.

2018ರಲ್ಲಿ ಅಭಿವೃದ್ಧಿಶೀಲ ದೇಶಗಳಿಗೆ ಹಣ ರವಾನೆ ಪ್ರಮಾಣಶೇ 10.8ರಷ್ಟು ಹೆಚ್ಚಾಗಲಿದ್ದು, ₹ 37.48 ಲಕ್ಷ ಕೋಟಿಗಳಿಗೆ ಏರಿಕೆಯಾಗಲಿದೆ ಎಂದು ಅಂದಾಜು ಮಾಡಿದೆ.

ಹೆಚ್ಚಿನ ವರಮಾನ ಹೊಂದಿರುವ ದೇಶಗಳನ್ನೂ ಒಳಗೊಂಡು ಜಾಗತಿಕ ರವಾನೆಪ್ರಮಾಣ ಶೇ 10.3ರಷ್ಟು ವೃದ್ಧಿಯಾಗಲಿದ್ದು, ₹ 48.91 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT