ರೆಪೊ ದರ ಏರಿಕೆ ಸಾಧ್ಯತೆ

7
ಕಚ್ಚಾ ತೈಲ ದರ ಏರಿಕೆ, ರೂಪಾಯಿ ಮೌಲ್ಯ ಇಳಿಕೆ ಪರಿಣಾಮ

ರೆಪೊ ದರ ಏರಿಕೆ ಸಾಧ್ಯತೆ

Published:
Updated:

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ಶೇ 0.25ರಷ್ಟು ಬಡ್ಡಿದರ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಚ್ಚಾ ತೈಲ ದರ ಏರಿಕೆ, ರೂಪಾಯಿ ಮೌಲ್ಯ ಇಳಿಕೆಯಿಂದಾಗಿ ಹಣದುಬ್ಬರ ಏರಿಕೆಯಾಗುವ ಸಾಧ್ಯತೆ ಇದೆ. ಇದನ್ನು ನಿಯಂತ್ರಿಸಲು ಬಡ್ಡಿದರ ಏರಿಕೆ ಮಾಡಲಿದೆ ಎಂದು ಹೇಳಿದ್ದಾರೆ.

ಹಣಕಾಸು ನೀತಿ ಸಮಿತಿಯು ಬುಧವಾರದಿಂದ ಶುಕ್ರವಾರದವರೆಗೆ ಮೂರು ದಿನ ಸಭೆ ನಡೆಸಲಿದೆ.

‘ಆರ್‌ಬಿಐ, ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ (ರೆಪೊ) ಸದ್ಯ ಶೇ 6.50 ರಷ್ಟಿದೆ. ಪೆಟ್ರೋಲ್‌, ಡೀಸೆಲ್ ತುಟ್ಟಿಯಾಗಿರುವುದರಿಂದ ಹಣದುಬ್ಬರವೂ ಏರಿಕೆಯಾಗಲಿದೆ. ಹೀಗಾಗಿ ಆರ್‌ಬಿಐ ಮುನ್ನೆಚ್ಚರಿಕಾ ಕ್ರಮವಾಗಿ ರೆಪೊ ದರ ಹೆಚ್ಚಿಸಲಿದೆ’ ಎಂದು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಜ್‌ ಕಿರಣ್ ರಾಯ್‌ ಜಿ. ಅವರು ಹೇಳಿದ್ದಾರೆ.

ತೈಲ ದರ ಏರುಮುಖವಾಗಿದ್ದರೂ ಆಗಸ್ಟ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ 4.17ರಿಂದ ಶೇ 3.69ಕ್ಕೆ ಇಳಿಕೆಯಾಗಿದೆ.

ರೂಪಾಯಿ ಮೌಲ್ಯ ಕುಸಿತ ತಡೆಯಲು ಆರ್‌ಬಿಐ ಶೇ 0.25ರಷ್ಟು ಬಡ್ಡಿದರ ಏರಿಕೆ ಮಾಡಬೇಕು ಎಂದು ಎಸ್‌ಬಿಐ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ.

ಆರ್‌ಬಿಐ ಅಲ್ಪಾವಧಿ ಬಡ್ಡಿದರಗಳಲ್ಲಿ ಏರಿಕೆ ಮಾಡಲಿದೆ ಎಂದು ಮಾರ್ಗನ್‌ ಸ್ಟ್ಯಾನ್ಲಿ ಸಂಸ್ಥೆ ಹೇಳಿದೆ.

ಬ್ಯಾಂಕ್‌ಗಳಲ್ಲಿ ನಗದು ಸ್ಥಿತಿ ಅಷ್ಟೇನೂ ಹಿತಕರವಾಗಿಲ್ಲ. ಹೀಗಾಗಿ ನಗದು ಮೀಸಲು ಅನುಪಾತವನ್ನು (ಸಿಆರ್‌ಆರ್‌) ಕಡಿಮೆ ಮಾಡುವ ನಿರೀಕ್ಷೆ ಇಲ್ಲ ಎಂದು ಬ್ಯಾಂಕಿಂಗ್‌ ತಜ್ಞರು ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !