ಬುಧವಾರ, ಅಕ್ಟೋಬರ್ 20, 2021
24 °C

ಏರ್‌ ಇಂಡಿಯಾ ಖಾಸಗೀಕರಣವು ಔದ್ಯಮಿಕ ರಂಗದ ಪುನರ್‌ರಚನೆಗೆ ಹಾದಿ: ಆನಂದ್ ಮಹೀಂದ್ರ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ದೆಹಲಿ: ಏರ್ ಇಂಡಿಯಾದಲ್ಲಿನ ಸರ್ಕಾರದ ಪಾಲು ಹಿಂತೆಗೆತವು ಭಾರತದ ಔದ್ಯಮಿಕ ರಂಗದ ಪುನರ್‌ರಚನೆಗೆ ಸಮಾನವಾದದ್ದು ಎಂದು ಮಹೀಂದ್ರ ಗ್ರೂಪ್‌ನ ಅಧ್ಯಕ್ಷ ಆನಂದ್‌ ಮಹೀಂದ್ರ ಅವರು ಅಭಿಪ್ರಾಯಪಟ್ಟಿದ್ದಾರೆ. 

ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್‌ಇಂಡಿಯಾದಲ್ಲಿನ ಸರ್ಕಾರದ ಶೇ. 100ರಷ್ಟು ಷೇರನ್ನು ಟಾಟಾ ತನ್ನದಾಗಿಸಿಕೊಂಡಿದೆ. ಇದೇ ಹಿನ್ನೆಲೆಯಲ್ಲಿ ಆನಂದ್‌ ಮಹೀಂದ್ರ ಅವರು ಶುಕ್ರವಾರ ಟ್ವೀಟ್‌ ಮಾಡಿದ್ದಾರೆ. 

‘ಈ ಘಟನೆಯ ಪ್ರಾಮುಖ್ಯತೆಯನ್ನು ನಾನು ವಿಪರೀತವಾಗಿ ಬಿಂಬಿಸುತ್ತಿದ್ದೆನೆ ಎಂದು ನನ್ನನ್ನು ದೂಷಿಸಬಹುದು. ಆದರೆ, ಏರ್‌ ಇಂಡಿಯಾದಲ್ಲಿನ ಸರ್ಕಾರದ ಷೇರು ಹಿಂತೆಗೆತವು, ಭಾರತೀಯ ಔದ್ಯಮಿಕ ರಂಗದ ಪುನಾರಚನೆಗೆ ದಾರಿ ಮಾಡಿಕೊಡಬಹುದು ಎಂದು ನಾನು ಭಾವಿಸುತ್ತೇನೆ. ಹೌದು, ಸರ್ಕಾರ ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಯತ್ನಿಸುತ್ತಿರಬಹುದು. ಆದರೆ ಖಾಸಗಿ ರಂಗದ ಮೇಲೆ ದಶಕಗಳ ನಂತರ ತನ್ನ ನಂಬಿಕೆಯನ್ನು ಮರುಸ್ಥಾಪಿಸುತ್ತಿದೆ,‘ ಎಂದು ಆನಂದ್‌ ಮಹೀಂದ್ರ ಹೇಳಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು