ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿ:ಭಾಗಶಃ ಮುಂಗಡಪಡೆಯುವ ಸೌಲಭ್ಯ ಜಾರಿ

ಇಪಿಎಫ್‌ಒ ನಿರ್ಧಾರ; ಕಾರ್ಮಿಕ ಸಚಿವಾಲಯ ಕ್ರಮ
Last Updated 25 ಫೆಬ್ರುವರಿ 2020, 19:58 IST
ಅಕ್ಷರ ಗಾತ್ರ

ನವದೆಹಲಿ: ನಿವೃತ್ತರು ಪ್ರತಿ ತಿಂಗಳೂ ಪಡೆಯುವ ತಮ್ಮ ಪಿಂಚಣಿಯ ಭಾಗಶಃ ಮೊತ್ತವನ್ನು ಮುಂಗಡವಾಗಿ ಒಂದೇ ಕಂತಿನಲ್ಲಿ ಪಡೆಯುವ ಸೌಲಭ್ಯವನ್ನು ಕಾರ್ಮಿಕ ಸಚಿವಾಲಯವು ಜಾರಿಗೆ ತರಲಿದೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ), ಉದ್ಯೋಗಿಗಳ ಪಿಂಚಣಿ ಯೋಜನೆಯಡಿ (ಇಪಿಎಸ್‌) ಈ ಯೋಜನೆ ತರಲು ಅನುಮತಿ ನೀಡಿತ್ತು. ನಿವೃತ್ತಿ ನಂತರ ಪ್ರತಿ ತಿಂಗಳೂ ತಾವು ಪಡೆಯುವ ಪಿಂಚಣಿಯ ಕೆಲ ಭಾಗವನ್ನು ಒಂದೇ ಕಂತಿನಲ್ಲಿ ಮುಂಚಿತವಾಗಿ ಪಡೆಯಲು ಅವಕಾಶ ಮಾಡಿಕೊಡುವ ಬಗ್ಗೆ ಸರ್ಕಾರಿ ನೌಕರರು ಒಲವು ತೋರಿದ್ದರು.

ಈ ಯೋಜನೆಯಡಿ, ಪ್ರತಿ ತಿಂಗಳ ಪಿಂಚಣಿಯ ಒಂದು ಮೂರಾಂಶದಷ್ಟು ಮೊತ್ತವನ್ನು 15 ವರ್ಷಗಳವರೆಗೆ ಕಡಿತ ಮಾಡಲಾಗುವುದು. ಹೀಗೆ ಕಡಿತ ಮಾಡಿದ ಮೊತ್ತವನ್ನು ನೌಕರರು ನಿವೃತ್ತರಾಗುವಾಗಲೇ ಒಂದೇ ಗಂಟಿನಲ್ಲಿ ನೀಡಲಾಗುವುದು. 15 ವರ್ಷಗಳ ನಂತರ ನಿವೃತ್ತರು ಪೂರ್ಣ ಪ್ರಮಾಣದ ಪಿಂಚಣಿ ಪಡೆಯಲಿದ್ದಾರೆ. 6.3 ಲಕ್ಷ ಪಿಂಚಣಿದಾರರು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.

2008ರ ಸೆಪ್ಟೆಂಬರ್‌ 25ರಂದು ಮತ್ತು ಅದಕ್ಕೂ ಮುಂಚೆ ಈ ಸೌಲಭ್ಯ ಆಯ್ಕೆ ಮಾಡಿಕೊಂಡವರಿಗೆ ಇದರ ಪ್ರಯೋಜನ ದೊರೆಯಲಿದೆ. ರದ್ದುಪಡಿಸಲಾಗಿದ್ದ ಈ ಸೌಲಭ್ಯವನ್ನು ಮತ್ತೆ ಜಾರಿಗೆ ತರಬೇಕೆಂಬ ಒತ್ತಾಯ ಕೇಳಿಬಂದಿತ್ತು. ಸರ್ಕಾರದ ಕೆಲ ಉದ್ಯೋಗಿಗಳಿಗೆ ಈಗಲೂ ಈ ಸೌಲಭ್ಯ ಲಭ್ಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT