ತಗ್ಗಿದ ಚಿಲ್ಲರೆ ಹಣದುಬ್ಬರ

7
ತರಕಾರಿ, ಹಣ್ಣಿನ ಬೆಲೆ ಇಳಿಕೆ; ಇಂಧನ, ವಿದ್ಯುತ್‌ ತುಟ್ಟಿ

ತಗ್ಗಿದ ಚಿಲ್ಲರೆ ಹಣದುಬ್ಬರ

Published:
Updated:

ನವದೆಹಲಿ: ತರಕಾರಿ ಮತ್ತು ಹಣ್ಣಿನ ಬೆಲೆಯಲ್ಲಿ ಇಳಿಕೆ ಆಗಿರುವುದರಿಂದ ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ 4.17ರಷ್ಟಾಗಿದೆ. 

2017ರ ಅಕ್ಟೋಬರ್‌ ತಿಂಗಳಿನಲ್ಲಿದ್ದ ಶೇ 3.58ರಷ್ಟಕ್ಕೆ ಹೋಲಿಸಿದರೆ, 2018ರ ಜುಲೈ ತಿಂಗಳ ಹಣದುಬ್ಬರ 9 ತಿಂಗಳ ಕನಿಷ್ಠ ಮಟ್ಟವಾಗಿದೆ ಎಂದು ಕೇಂದ್ರೀಯ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಮಾಹಿತಿ ನೀಡಿದೆ.

ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡುವುದಾದರೆ, 2017ರ ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ 2.36ಕ್ಕೆ ಏರಿಕೆ ಕಂಡಿತ್ತು. ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ (ಸಿಪಿಐ) ಚಿಲ್ಲರೆ ಹಣದುಬ್ಬರವು ಜೂನ್‌ನಲ್ಲಿ ಶೇ 4.92ರಷ್ಟಿತ್ತು.

ಇಂಧನ ಮತ್ತು ವಿದ್ಯುತ್‌ ಶೇ 7.14 ರಿಂದ  ಶೇ 7.96 ಕ್ಕೆ ಏರಿಕೆಯಾಗಿವೆ.

ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿಯ (ಎನ್‌ಎಸ್‌ಎಸ್‌ಒ) ಸ್ಥಳೀಯ ವಿಭಾಗವು ಕೆಲವು ನಿರ್ದಿಷ್ಟ ನಗರಗಳಿಂದ ದರಗಳ ಮಾಹಿತಿ ಸಂಗ್ರಹಿಸಿದೆ. ಅಂಚೆ ಇಲಾಖೆಯು ಗ್ರಾಮೀಣ ಭಾಗದಲ್ಲಿ ಮಾಹಿತಿ ಕಲೆಹಾಕಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರದ ಜಾಲತಾಣದಿಂದ ಈ ಮಾಹಿತಿಗಳನ್ನು ಪಡೆದುಕೊಳ್ಳಲಾಗಿದೆ ಎಂದು ಸಚಿವಾಲಯ ಹೇಳಿದೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !