ಸೋಮವಾರ, ಆಗಸ್ಟ್ 26, 2019
27 °C

ಚಿಲ್ಲರೆ ಹಣದುಬ್ಬರ ಅಲ್ಪ ಇಳಿಕೆ

Published:
Updated:

ನವದೆಹಲಿ (ಪಿಟಿಐ): ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು ಜುಲೈನಲ್ಲಿ ಶೇ 3.15ರಷ್ಟಾಗಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಹೇಳಿದೆ.

2019ರ ಜೂನ್‌ನಲ್ಲಿದ್ದ ಶೇ 3.18ಕ್ಕೆ ಹೋಲಿಸಿದರೆ ಅಲ್ಪ ಇಳಿಕೆ ಕಂಡಿದೆ. 2018ರ ಜುಲೈನ ಶೇ 4.17ಕ್ಕೆ ಹೋಲಿಸಿದರೆ ಶೇ 10.2ರಷ್ಟು ಇಳಿಕೆಯಾಗಿದೆ.

ವಿದ್ಯುತ್ ದರದಲ್ಲಿ ಇಳಿಕೆ ಆಗಿರುವುದರಿಂದ ಚಿಲ್ಲರೆ ಹಣ ದುಬ್ಬರ ತುಸು ತಗ್ಗಿದೆ. ಆಹಾರ ಹಣದುಬ್ಬರ ಶೇ 2.25 ರಿಂದ ಶೇ 2.36ಕ್ಕೆ ಏರಿಕೆಯಾಗಿದೆ. 

ತರಕಾರಿಗಳ ದರ ಏರಿಕೆಯು ಶೇ 4.66 ರಿಂದ ಶೇ 2.82ಕ್ಕೆ ತಗ್ಗಿದೆ. ಬೇಳೆಕಾಳು ಮತ್ತು ಉತ್ಪನ್ನಗಳ ದರ ಶೇ 5.68ರಿಂದ ಶೇ 6.82ಕ್ಕೆ ಏರಿದೆ.

‘ಸಿಪಿಐ’ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ 0.15ರಷ್ಟು ರೆಪೊ ದರ ಕಡಿತಕ್ಕೆ ದಾರಿ ಮಾಡಿಕೊಡಲಿದೆ’ ಎಂದು ‘ಇಕ್ರಾ’ದ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್‌ ಹೇಳಿದ್ದಾರೆ.

Post Comments (+)