ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈನಲ್ಲಿ ತಗ್ಗಿದ ಹಣದುಬ್ಬರ

Last Updated 12 ಆಗಸ್ಟ್ 2022, 15:57 IST
ಅಕ್ಷರ ಗಾತ್ರ

ನವದೆಹಲಿ: ಜುಲೈ ತಿಂಗಳಿನಲ್ಲಿ ದೇಶದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇಕಡ 6.71ಕ್ಕೆ ಇಳಿಕೆಯಾಗಿದೆ. ಜೂನ್‌ನಲ್ಲಿ ಇದು ಶೇ 7.01ರಷ್ಟು ಇತ್ತು.

ಆಹಾರ ವಸ್ತುಗಳ ಬೆಲೆಯು ತಗ್ಗಿದ ಪರಿಣಾಮವಾಗಿ ಹಣದುಬ್ಬರ ಪ್ರಮಾಣವು ತುಸು ಇಳಿಕೆ ಕಂಡಿದೆ. ಹೀಗಿದ್ದರೂ, ಜುಲೈನಲ್ಲಿ ದಾಖಲಾಗಿರುವ ಪ್ರಮಾಣವು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ನಿಗದಿ ಮಾಡಿಕೊಂಡಿರುವ ಗರಿಷ್ಠ ಮಿತಿಗಿಂತ (ಶೇ 6) ಹೆಚ್ಚು.

ತರಕಾರಿ ಮತ್ತು ಅಡುಗೆ ಎಣ್ಣೆಗಳು ಸೇರಿದಂತೆ ಹಲವು ಉತ್ಪನ್ನಗಳ ಬೆಲೆಯಲ್ಲಿ ಇಳಿಕೆಯಾಗಿದ್ದರೂ, ಚಿಲ್ಲರೆ ಹಣದುಬ್ಬರ ದರವು ಗರಿಷ್ಠ ಮಟ್ಟಕ್ಕಿಂತ ಮೇಲೆಯೇ ಇರುವ ಕಾರಣ ಆರ್‌ಬಿಐ ರೆಪೊ ದರವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ಚಿಲ್ಲರೆ ಹಣದುಬ್ಬರ ದರವು ಹಿಂದಿನ ವರ್ಷದ ಜುಲೈನಲ್ಲಿ ಶೇ 5.59ರಷ್ಟು ಇತ್ತು.

ಹಣದುಬ್ಬರ ಪ್ರಮಾಣ (%)[ಯಾವುದು;ಜುಲೈ;ಜೂನ್]

ಆಹಾರ ವಸ್ತುಗಳು;6.75;7.75

ತರಕಾರಿಗಳು;10.90;17.37

ಎಣ್ಣೆ, ಕೊಬ್ಬಿನ ಅಂಶದ ಪದಾರ್ಥ;7.52;9.36

ಇಂಧನ;11.76;10.39

ಹಣ್ಣುಗಳು;6.41;3.10

***

ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಹಾಗೂ ಜಾಗತಿಕ ಮಟ್ಟದಲ್ಲಿನ ಅನಿಶ್ಚಿತ ವಾತಾವರಣದ ಕಾರಣದಿಂದಾಗಿ ಸರಕುಗಳ ಬೆಲೆಯಲ್ಲಿ ಇಳಿಕೆ ಆಗಿದೆ. ಮುಂದಿನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಆರ್‌ಬಿಐ, ರೆಪೊ ದರವನ್ನು ಶೇ 0.10ರಿಂದ ಶೇ 0.35ರವರೆಗೆ ಹೆಚ್ಚಿಸುವ ಸಾಧ್ಯತೆ ಇದೆ.

– ಅದಿತಿ ನಯ್ಯರ್, ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT